ADVERTISEMENT

ತಗ್ಗಿದ ಕೈಗಾರಿಕಾ ಉತ್ಪಾದನೆ

ಪಿಟಿಐ
Published 10 ಫೆಬ್ರುವರಿ 2023, 17:27 IST
Last Updated 10 ಫೆಬ್ರುವರಿ 2023, 17:27 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ (ಪಿಟಿಐ): ದೇಶದ ಕೈಗಾರಿಕಾ ಉತ್ಪಾದನೆಯು ನವೆಂಬರ್‌ನಲ್ಲಿ ಶೇ 7.3ರಷ್ಟು ಇದ್ದಿದ್ದು ಡಿಸೆಂಬರ್‌ನಲ್ಲಿ ಶೇ 4.3ಕ್ಕೆ ಇಳಿಕೆ ಕಂಡಿದೆ.

ತಯಾರಿಕಾ ವಲಯದ ಚಟುವಟಿಕೆಗಳು ಮಂದಗತಿಯಲ್ಲಿ ಸಾಗಿದ್ದರಿಂದ ಬೆಳವಣಿಗೆ ಪ್ರಮಾಣ ಇಳಿಕೆ ಕಂಡಿದೆ. ಆದರೆ, 2021ರ ಡಿಸೆಂಬರ್‌ನಲ್ಲಿ ಕೈಗಾರಿಕಾ ಉತ್ಪಾದನೆ ಸೂಚ್ಯಂಕವು (ಐಐಪಿ) ಶೇ 1ರಷ್ಟು ಇತ್ತು. ಇದಕ್ಕೆ ಹೋಲಿಸಿದರೆ ಐಐಪಿ ಏರಿಕೆ ಆಗಿದೆ.

ರಾಷ್ಟ್ರೀಯ ಸಾಂಖ್ಯಿಕ ಕಚೇರಿಯು (ಎನ್‌ಎಸ್‌ಒ) ಬಿಡುಗಡೆ ಮಾಡಿರುವ ಮಾಹಿತಿಯ ಪ್ರಕಾರ, ತಯಾರಿಕಾ ವಲಯದ ಬೆಳವಣಿಗೆಯು 2022ರ ಡಿಸೆಂಬರ್‌ನಲ್ಲಿ ಶೇ 2.6ರಷ್ಟು ಆಗಿದೆ. ನವೆಂಬರ್‌ನಲ್ಲಿ ಶೇ 6.4ರಷ್ಟು ಆಗಿತ್ತು.

ADVERTISEMENT

ಗಣಿ ವಲಯದ ಬೆಳವಣಿಗೆ ಶೇ 9.8 ಮತ್ತು ವಿದ್ಯುತ್ ವಲಯದ ಬೆಳವಣಿಗೆ ಶೇ 10.4ರಷ್ಟು ಆಗಿದೆ. ಬಂಡವಾಳ ಸರಕುಗಳ ವಲಯ ಶೇ 7.6ರಷ್ಟು ಬೆಳವಣಿಗೆ ಕಂಡಿದೆ. ಏಪ್ರಿಲ್‌–ಡಿಸೆಂಬರ್ ಅವಧಿಯಲ್ಲಿ ಐಐಪಿ ಶೇ 5.4ರಷ್ಟು ಆಗಿದೆ. 2021ರ ಇದೇ ಅವಧಿಯಲ್ಲಿ ಶೇ 15.3ರಷ್ಟು ಇತ್ತು. ಇದಕ್ಕೆ ಹೋಲಿಸಿದರೆ ಇಳಿಕೆ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.