ADVERTISEMENT

ಫೋರ್ಬ್ಸ್‌: ಜಾಗತಿಕ ಗೌರವಾನ್ವಿತ ಕಂಪನಿ ಪಟ್ಟಿಯಲ್ಲಿ ‘ಇನ್ಫಿ’ಗೆ ಬಡ್ತಿ

250 ದೇಶಗಳ ಪಟ್ಟಿಯಲ್ಲಿ ಅಮೆರಿಕದ 59 ಕಂಪನಿಗಳ ಗರಿಷ್ಠ ಪಾಲು

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2019, 19:31 IST
Last Updated 24 ಸೆಪ್ಟೆಂಬರ್ 2019, 19:31 IST
ಇನ್ಫೊಸಿಸ್‌
ಇನ್ಫೊಸಿಸ್‌   

ನವದೆಹಲಿ: ಫೋರ್ಬ್ಸ್‌ ನಿಯತಕಾಲಿಕೆಯು ಪ್ರಕಟಿಸಿರುವ ಗ್ರಾಹಕರ ಮನ್ನಣೆಗೆ ‍ಪಾತ್ರವಾಗಿರುವ ಮುಂಚೂಣಿ ಕಂಪನಿಗಳ ಪಟ್ಟಿಯಲ್ಲಿ ಬೆಂಗಳೂರಿನ ಐ.ಟಿ ದೈತ್ಯ ಸಂಸ್ಥೆ ಇನ್ಫೊಸಿಸ್‌, ಈ ವರ್ಷ ಮೂರನೇ ಸ್ಥಾನಕ್ಕೆ ಬಡ್ತಿ ಪಡೆದಿದೆ.

ವಿಶ್ವಾಸಾರ್ಹತೆ, ಉತ್ಪನ್ನ ಮತ್ತು ಸೇವೆಗಳ ಕಾರ್ಯಕ್ಷಮತೆ, ಕಂಪನಿಯ ಸಾಮಾಜಿಕ ಕಾಳಜಿ, ಉದ್ಯೋಗಿಗಳ ಬಗ್ಗೆ ತಳೆದ ನ್ಯಾಯೋಚಿತ ನಿಲುವು ಆಧರಿಸಿ ಅತಿ ಹೆಚ್ಚು ಗೌರವಕ್ಕೆ ಪಾತ್ರವಾಗಿರುವ ಕಂಪನಿಗಳನ್ನು ಆಯ್ಕೆ ಮಾಡಲಾಗಿದೆ. 50 ದೇಶಗಳಲ್ಲಿನ 15 ಸಾವಿರ ಗ್ರಾಹಕರ ಸಮೀಕ್ಷೆ ಆಧರಿಸಿ ಈ ಪಟ್ಟಿ ಸಿದ್ಧಪಡಿಸಲಾಗಿದೆ.

ವಿಶ್ವದ ಅತ್ಯಂತ ಗೌರವಾನ್ವಿತ ಕಂಪನಿಗಳ ಪಟ್ಟಿಯಲ್ಲಿ ಜಾಗತಿಕ ಹಣ ಪಾವತಿ ತಂತ್ರಜ್ಞಾನ ಕಂಪನಿ ವೀಸಾ ಮತ್ತು ಇಟಲಿಯ ಕಾರ್‌ ತಯಾರಿಕಾ ಸಂಸ್ಥೆ ಫೆರಾರಿ, ಮೊದಲ ಒಂದು ಮತ್ತು ಎರಡನೆ ಸ್ಥಾನದಲ್ಲಿ ಇವೆ. 2018ರಲ್ಲಿ 31ನೆ ಸ್ಥಾನದಲ್ಲಿದ್ದ ಇನ್ಫೊಸಿಸ್‌, ಈ ಬಾರಿ 3ನೆ ಸ್ಥಾನಕ್ಕೆ ಏರಿದೆ. ಶ್ರೇಯಾಂಕ ಪಟ್ಟಿಯಲ್ಲಿ ಏಷ್ಯಾದ ಕಂಪನಿಗಳ ಪಾಲು ಹೆಚ್ಚಳಗೊಂಡಿದೆ.

ADVERTISEMENT

ಮೊದಲ 50 ಗೌರವಾನ್ವಿತ ಕಂಪನಿಗಳ ಪಟ್ಟಿಯಲ್ಲಿ ಟಾಟಾ ಕನ್ಸಲ್ಟನ್ಸಿ ಸರ್ವಿಸಸ್‌ (22) ಮತ್ತು ಟಾಟಾ ಮೋಟರ್ಸ್‌ 31ನೆ ಸ್ಥಾನದಲ್ಲಿವೆ.

250 ದೇಶಗಳ ಪಟ್ಟಿಯಲ್ಲಿ ಅಮೆರಿಕದ 59 ಕಂಪನಿಗಳು ಗರಿಷ್ಠ ಪಾಲು ಹೊಂದಿವೆ. ಭಾರತ, ಚೀನಾ ಮತ್ತು ಜಪಾನಿನ 82 ಕಂಪನಿಗಳು ಇವೆ. ಅರ್ಧದಷ್ಟು ಕಂಪನಿಗಳು ಏಷ್ಯಾಕ್ಕೆ ಸೇರಿವೆ.

ಜಾಗತಿಕಮಟ್ಟದಲ್ಲಿ ಕಂಪನಿಯ ಸ್ಥಾನಗಳು

ವೀಸಾ; 1

ಫೆರಾರಿ; 2

ಇನ್ಫೊಸಿಸ್‌; 3

ನೆಟ್‌ಫ್ಲಿಕ್ಸ್‌; 4

ಪೇಪಲ್‌ ;5

ಮೈಕ್ರೊಸಾಫ್ಟ್‌; 6

ವಾಲ್ಟ್‌ಡಿಸ್ನಿ; 7

ಟೊಯೋಟ ಮೋಟರ್‌; 8

ಮಾಸ್ಟರ್‌ಕಾರ್ಡ್‌; 9

ಕೋಸ್ಟ್‌ಕೊ ಹೋಲ್‌ಸೇಲ್‌; 10

***

ಪಟ್ಟಿಯಲ್ಲಿ ಭಾರತದ ಇತರ ಕಂಪನಿ ವಿವರ

ಕಂಪನಿಯಶ್ರೇಯಾಂಕ

ಟಾಟಾ ಸ್ಟೀಲ್‌; 105

ಲಾರ್ಸನ್‌ಆ್ಯಂಡ್‌ ಟುಬ್ರೊ; 115

ಮಹೀಂದ್ರಾ ಆ್ಯಂಡ್‌ ಮಹೀಂದ್ರಾ; 117

ವಿಪ್ರೊ; 168

ಐಟಿಸಿ; 231

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.