ADVERTISEMENT

ಇನ್ವೆಸ್ಕೊ ಮ್ಯೂಚುವಲ್ ಫಂಡ್‍ನ ಹೊಸ ನಿಧಿ ಕೊಡುಗೆ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2020, 2:17 IST
Last Updated 10 ಸೆಪ್ಟೆಂಬರ್ 2020, 2:17 IST
-
-   

ಮುಂಬೈ: ಇನ್ವೆಸ್ಕೊ ಮ್ಯೂಚುವಲ್ ಫಂಡ್, ತನ್ನ ಹೊಸ ನಿಧಿ ಇನ್ವೆಸ್ಕೊ ಇಂಡಿಯಾ ಫೋಕಸ್ಡ್ 20 ಈಕ್ವಿಟಿ ಫಂಡ್ ಆರಂಭಿಸಿದೆ.

‘ಇದೊಂದು ನೀಡಿಕೆ ಮತ್ತು ಮರು ಖರೀದಿಯ (ಓಪನ್ ಎಂಡೆಡ್) ಈಕ್ವಿಟಿ ಸ್ಕೀಮ್ ಆಗಿದ್ದು, ಮಾರುಕಟ್ಟೆ ಮೌಲ್ಯದ ವಿವಿಧ ಶ್ರೇಣಿಗಳಲ್ಲಿನ ಗರಿಷ್ಠ 20 ಷೇರುಗಳಲ್ಲಿ ಹೂಡಿಕೆ ಮಾಡುವ ಮೂಲಕ ಬಂಡವಾಳದ ಮೌಲ್ಯವರ್ಧನೆ ಮಾಡಲಿದೆ’ ಎಂದು ಇನ್ವೆಸ್ಕೊ ಮ್ಯೂಚುವಲ್ ಫಂಡ್‍ನ ಸಿಇಒ ಸೌರಭ್ ನಾನಾವತಿ ಅವರು ಹೇಳಿದ್ದಾರೆ.

ಕೊಡುಗೆ ಅವಧಿ: ಈ ಹೊಸ ನಿಧಿ ಕೊಡುಗೆಯು (ಎನ್‍ಎಫ್‍ಒ) ಹಣ ಹೂಡಿಕೆಗೆ ಸೆಪ್ಟೆಂಬರ್ 9ರಿಂದ ತೆರೆದುಕೊಳ್ಳಲಿದ್ದು, ಇದೇ 23ರಂದು ಕೊನೆಗೊಳ್ಳಲಿದೆ.

ADVERTISEMENT

ಕನಿಷ್ಠ ಹೂಡಿಕೆಯು ₹ 1,000 ಇರಲಿದೆ. ವ್ಯವಸ್ಥಿತ ಹೂಡಿಕೆ ಯೋಜನೆಯಡಿ (ಎಸ್‍ಐಪಿ- ಸಿಪ್) ಕನಿಷ್ಠ ಹೂಡಿಕೆಯು ₹ 500 ಇರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.