ADVERTISEMENT

ಐಪಿಒ: ಈ ವರ್ಷ ಸರಾಸರಿ ಶೇ 50ರಷ್ಟು ಲಾಭ

ಪಿಟಿಐ
Published 12 ಸೆಪ್ಟೆಂಬರ್ 2022, 16:15 IST
Last Updated 12 ಸೆಪ್ಟೆಂಬರ್ 2022, 16:15 IST

ಮುಂಬೈ: 2022ರಲ್ಲಿ ಐಪಿಒಗಳಲ್ಲಿ ಹಣ ತೊಡಗಿಸಿದವರಿಗೆ ಸರಾಸರಿ ಶೇಕಡ 50ರಷ್ಟು ಲಾಭ ಸಿಕ್ಕಿದೆ ಎಂದು ಅಧ್ಯಯನವೊಂದು ತಿಳಿಸಿದೆ. ಈ ವರ್ಷ ಒಟ್ಟು 51 ಕಂಪನಿಗಳು ಐಪಿಒ ಮೂಲಕ ₹ 38,155 ಕೋಟಿ ಬಂಡವಾಳ ಸಂಗ್ರಹಿಸಿವೆ.

ಐಪಿಒದಲ್ಲಿ ಈ ವರ್ಷದಲ್ಲಿ ನಷ್ಟ ಉಂಟುಮಾಡಿದ ಕಂಪನಿಗಳ ಪ್ರಮಾಣ ಶೇ 40ರಷ್ಟು, ಶೇ 20ಕ್ಕಿಂತ ಹೆಚ್ಚು ಲಾಭ ನೀಡಿದ ಕಂಪನಿಗಳ ಪ್ರಮಾಣ ಶೇ 45ರಷ್ಟು ಹಾಗೂ ಶೇ 100ಕ್ಕಿಂತ ಹೆಚ್ಚು ಲಾಭ ನೀಡಿದ ಕಂಪನಿಗಳ ಸಂಖ್ಯೆ ಐದು ಎಂದು ‘ಬ್ಯಾಂಕ್ ಆಫ್ ಬರೋಡ’ದ ಅರ್ಥಶಾಸ್ತ್ರಜ್ಞೆ ದೀಪಾನ್ವಿತಾ ಮಜುಮ್ದಾರ್ ನಡೆಸಿದ ಅಧ್ಯಯನವು ಕಂಡುಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT