ADVERTISEMENT

ಡಿಜಿಟಲ್ ಆರ್ಥಿಕತೆ ವೇಗಗೊಳಿಸಲು ಕೈಜೋಡಿಸಿದ ಕೆಡಿಇಎಂ–ಎಫ್‌ಕೆಸಿಸಿಐ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2025, 15:48 IST
Last Updated 26 ಡಿಸೆಂಬರ್ 2025, 15:48 IST
ಬೆಂಗಳೂರಿನಾಚೆಗೆ ಕರ್ನಾಟಕದ ಡಿಜಿಟಲ್ ಆರ್ಥಿಕತೆಯನ್ನು ವೇಗಗೊಳಿಸುವ ಉದ್ದೇಶದಿಂದ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (ಕೆಡಿಇಎಂ) ಮತ್ತು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯು (ಎಫ್‌ಕೆಸಿಸಿಐ) ಒಪ್ಪಂದಕ್ಕೆ ಸಹಿ ಹಾಕಿವೆ
ಬೆಂಗಳೂರಿನಾಚೆಗೆ ಕರ್ನಾಟಕದ ಡಿಜಿಟಲ್ ಆರ್ಥಿಕತೆಯನ್ನು ವೇಗಗೊಳಿಸುವ ಉದ್ದೇಶದಿಂದ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (ಕೆಡಿಇಎಂ) ಮತ್ತು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯು (ಎಫ್‌ಕೆಸಿಸಿಐ) ಒಪ್ಪಂದಕ್ಕೆ ಸಹಿ ಹಾಕಿವೆ   

ಬೆಂಗಳೂರು: ಬೆಂಗಳೂರಿನಾಚೆಗೆ ಕರ್ನಾಟಕದ ಡಿಜಿಟಲ್ ಆರ್ಥಿಕತೆಯನ್ನು ವೇಗಗೊಳಿಸುವ ಉದ್ದೇಶದಿಂದ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (ಕೆಡಿಇಎಂ) ಮತ್ತು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯು (ಎಫ್‌ಕೆಸಿಸಿಐ) ಒಪ್ಪಂದಕ್ಕೆ ಸಹಿ ಹಾಕಿವೆ. 

‘ಕರ್ನಾಟಕದ ಡಿಜಿಟಲ್ ಬೆಳವಣಿಗೆಯು ಕೇವಲ ಕೆಲವು ಕೇಂದ್ರಗಳಿಗೆ ಸೀಮಿತವಾಗಬಾರದು. ರಾಜ್ಯ ಮಟ್ಟದಲ್ಲಿ ಡಿಜಿಟಲ್ ಆರ್ಥಿಕತೆ ಬೆಳವಣಿಗೆ ಹೊಂದಬೇಕು. ಎಫ್‌ಕೆಸಿಸಿಐ ಜೊತೆಗಿನ ಈ ಪಾಲುದಾರಿಕೆಯು ನೀತಿ, ಉದ್ಯಮ ಭಾಗವಹಿಸುವಿಕೆಯನ್ನು ಜೋಡಿಸಿ ಈ ಉದ್ದೇಶ ಸಾಧನೆಗೆ ಸಹಾಯ ಮಾಡಲಿದೆ. ಜಿಲ್ಲೆಗಳಲ್ಲಿ ಮತ್ತು ಕ್ಲಸ್ಟರ್‌ ಮಟ್ಟದಲ್ಲಿ ಕಾರ್ಯ ನಿರ್ವಹಿಸುವ ಮೂಲಕ ಹೊಸ ಹೂಡಿಕೆಗಳನ್ನು ಸಾಧ್ಯವಾಗಿಸುವುದು, ಉದ್ಯಮಶೀಲತೆಯನ್ನು ವೇಗಗೊಳಿಸುವುದು ಮತ್ತು ತಂತ್ರಜ್ಞಾನ ಆಧಾರಿತ ಬೆಳವಣಿಗೆ ಉಂಟಾಗುವಂತೆ ಮಾಡುವುದು ನಮ್ಮ ಗುರಿಯಾಗಿದೆ’ ಎಂದು ಕೆಡಿಇಎಂನ ಸಿಇಒ ಸಂಜೀವ್ ಕುಮಾರ್ ಗುಪ್ತಾ ಹೇಳಿದರು.

‘ಈ ಒಡಂಬಡಿಕೆಯು ಕರ್ನಾಟಕದ ಡಿಜಿಟಲ್ ಆರ್ಥಿಕತೆಯಲ್ಲಿ ಭಾಗವಹಿಸಲು ಉದ್ಯಮಗಳಿಗೆ ಸ್ಪಷ್ಟ ಮಾರ್ಗಸೂಚಿಯನ್ನು ನೀಡುತ್ತದೆ. ನಮ್ಮ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಗಳು ಮತ್ತು ಸದಸ್ಯ ಜಾಲದ ಮೂಲಕ ಕೆಡಿಇಎಂನೊಂದಿಗೆ ಕೆಲಸ ಮಾಡಿ ಉದ್ಯಮಗಳು, ನವೋದ್ಯಮಗಳು ಮತ್ತು ಎಂಎಸ್‌ಎಂಇಗಳಿಗೆ ಹೂಡಿಕೆ, ಕೌಶಲ ಮತ್ತು ಹೊಸ ಆವಿಷ್ಕಾರ ಅವಕಾಶಗಳನ್ನು ಹೊಂದುವ ಸಂಪರ್ಕ ಒದಗಿಸುತ್ತೇವೆ’ ಎಫ್‌ಕೆಸಿಸಿಐಯ ಅಧ್ಯಕ್ಷೆ ಉಮಾ ರೆಡ್ಡಿ ಹೇಳಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.