ADVERTISEMENT

23 ಬಗೆಯ ನಂದಿನಿ ಐಸ್‌ಕ್ರೀಂ

ಬ್ರ್ಯಾಂಡ್‌ನ ಐಸ್‌ಕ್ರೀಂಗಳ ಸಂಖ್ಯೆ 115ಕ್ಕೆ ಏರಿಕೆ: ಮೃತ್ಯುಂಜಯ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2019, 17:05 IST
Last Updated 8 ಏಪ್ರಿಲ್ 2019, 17:05 IST
ಕೆಎಂಎಫ್‌ ಮಾರುಕಟ್ಟೆ ನಿರ್ದೇಶಕ ಮೃತ್ಯುಂಜಯ ಕುಲಕರ್ಣಿ (ಎಡದಿಂದ ನಾಲ್ಕನೇಯವರು)ವಿವಿಧ ರುಚಿಗಳ ಐಸ್‌ಕ್ರೀಂಗಳನ್ನು ಬಿಡುಗಡೆ ಮಾಡಿದರು. ಸಂಸ್ಥೆಯ ಅಧಿಕಾರಿಗಳು ಇದ್ದರು
ಕೆಎಂಎಫ್‌ ಮಾರುಕಟ್ಟೆ ನಿರ್ದೇಶಕ ಮೃತ್ಯುಂಜಯ ಕುಲಕರ್ಣಿ (ಎಡದಿಂದ ನಾಲ್ಕನೇಯವರು)ವಿವಿಧ ರುಚಿಗಳ ಐಸ್‌ಕ್ರೀಂಗಳನ್ನು ಬಿಡುಗಡೆ ಮಾಡಿದರು. ಸಂಸ್ಥೆಯ ಅಧಿಕಾರಿಗಳು ಇದ್ದರು   

ಬೆಂಗಳೂರು: ‘ನಂದಿನಿ ಬ್ರ್ಯಾಂಡ್‌’ನ 23 ವಿವಿಧ ರುಚಿಗಳ ಐಸ್‌ಕ್ರೀಂಗಳನ್ನು ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್‌) ಸೋಮವಾರ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಸದ್ಯ ನಂದಿನಿ ಬ್ರ್ಯಾಂಡ್‌ನಲ್ಲಿ 92 ವಿಧದ ಐಸ್‌ಕ್ರೀಂಗಳಿದ್ದು, ಈಗ ಈ ಸಂಖ್ಯೆ 115ಕ್ಕೆ ಏರಿಕೆಯಾಗಿದೆ ಎಂದು ಕೆಎಂಎಫ್‌ ಮಾರುಕಟ್ಟೆ ನಿರ್ದೇಶಕ ಮೃತ್ಯುಂಜಯ ಕುಲಕರ್ಣಿ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.

ಸ್ಟ್ರಾಬೆರಿ ಕೋನ್‌, ಪಿಸ್ತಾ ಕೋನ್‌, ಮ್ಯಾಂಗೋ ಎಸ್ಪ್‌ಬೆರ್ರಿ ಕ್ಯಾಂಡಿ, ಚಾಕಲೇಟ್‌ ಚೋಕೊಬಾರ್, ಸ್ಟ್ರಾಬೆರಿ ಚೋಕೊಬಾರ್, ಬಟರ್ ಸ್ಕಾಚ್ ಚೋಕೊಬಾರ್, ಆರೇಂಜ್ ಡಾಲಿ, ಸ್ಟ್ರಾಬೆರಿ ಡಾಲಿ, ಬ್ಲೂಬೆರ್ರಿ ಡಾಲಿ, ಬ್ಲ್ಯಾಕ್ ಕರಂಟ್ ಡಾಲಿ, ಲಿಚಿ ಡಾಲಿ, ಮ್ಯಾಂಗೋ ರಿಪ್ಪಲ್ ಸಂಡೇ ಟಬ್, ಮಲೈ ಕುಫ್ಫಿ ಟಬ್, ಕೇಸರ್ ಬಾದಾಮ್ ಟಬ್, ಶಾಹೀ ಭೋಗ್ ಟಬ್, ರಾಜಭೋಗ್, ಚೀಸಿ ಅಲ್ಮಂಡ್ ಟಬ್, ನಟ್ಟೀ ಹನಿ, ಫ್ರೂಟ್ ಬೊನಾಝಾ ಸಂಡೇ ಟಬ್‌, ಆರೆಂಜ್ ಸಿಪ್ ಅಪ್(ಟ್ಯೂಬ್‌) ಐಸ್‌ಕ್ರೀಂಗಳು ಮಂಗಳವಾರದಿಂದಲೇ ಎಲ್ಲಾ ನಂದಿನಿ ಮಳಿಗೆಗಳಲ್ಲಿ ದೊರೆಯಲಿವೆ ಎಂದು ವಿವರಿಸಿದರು.

ADVERTISEMENT

‘ಮಕ್ಕಳು ಮತ್ತು ಯುವ ಪೀಳಿಗೆಯ ಅಭಿರುಚಿಯನ್ನು ಆಧರಿಸಿ ಹೊಸ ಮಾದರಿಯ ಐಸ್‌ಕ್ರೀಂ ಉತ್ಪಾದನೆ ಮಾಡಲಾಗಿದೆ’ ಎಂದು ಅವರುಹೇಳಿದರು.

‘ಸದ್ಯ ರಾಜ್ಯದಲ್ಲಿ 1,500 ನಂದಿನಿ ಪಾರ್ಲರ್‌ಗಳಿವೆ. ನಂದಿನಿ ಐಸ್‌ಕ್ರೀಂ ಎಲ್ಲೆಡೆ ಸಿಗುವಂತೆ ಮಾಡಲು ಹೊಸದಾಗಿ 1,000 ಮಳಿಗೆಗಳನ್ನು ತೆರೆಯಲು ಯೋಜನೆ ರೂಪಿಸಲಾಗಿದ್ದು , ತಾಲ್ಲೂಕು ಮಟ್ಟದಲ್ಲೂ ಪಾರ್ಲರ್‌ಗಳು ಬರಲಿವೆ. ಸದ್ಯ 73 ಮಂದಿ ಸಗಟು ಮಾರಾಟಗಾರರಿದ್ದು, ಹೊಸದಾಗಿ 40 ಜನ ಸಗಟು ಮಾರಾಟಗಾರರನ್ನು ನೇಮಿಸುವ ಉದ್ದೇಶ ಇದೆ’ ಎಂದರು.

ಹೊರರಾಜ್ಯಕ್ಕೆ ನಂದಿನಿ ಐಸ್‌ಕ್ರೀಂ: ‘ಆಂಧ್ರ ಪ್ರದೇಶ, ತೆಲಂಗಾಣ, ಗೋವಾ, ಕೇರಳ, ತಮಿಳುನಾಡು ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲೂ ಐಸ್‌ಕ್ರೀಂ ಮಾರಾಟಕ್ಕೆ ಕ್ರಮ ಕೈಗೊಳ್ಳಲಾಗಿದೆ. ನೆರೆ ರಾಜ್ಯಗಳಲ್ಲಿ ಸಗಟು ಮಾರಾಟಗಾರರನ್ನು ಗುರುತಿಸಲಾಗಿದೆ’ ಎಂದು ಅವರು ತಿಳಿಸಿದರು.

‘ಐಸ್‌ಕ್ರೀಂ ಅಥವಾ ನಂದಿನಿ ಉತ್ಪನ್ನ
ಗಳಿಗೆ ಹಾಲಿನ ಕೊರತೆ ಇಲ್ಲ. ಸದ್ಯ ಪ್ರತಿನಿತ್ಯ 6.50 ಲಕ್ಷ ಲೀಟರ್ ಹಾಲನ್ನು ರೈತರಿಂದ ಖರೀದಿ ಮಾಡಲಾಗುತ್ತಿದೆ. ಕೆಎಂಎಫ್ ಲಾಭವೂ ಇಲ್ಲದ, ನಷ್ಟವೂ ಇಲ್ಲದ ಸಹಕಾರಿ ಸಂಸ್ಥೆ. ನಂದಿನಿ ಉತ್ಪನ್ನಗಳಲ್ಲಿ ಲಾಭ ಬಂದರೆ ಅದನ್ನು ರೈತರಿಗೆ ವರ್ಗಾಯಿಸಲಾಗುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.