ADVERTISEMENT

ಬೆಂಗಳೂರಿನಲ್ಲಿ ಚುರುಕಾದ ರಿಯಲ್‌ ಎಸ್ಟೇಟ್‌

2019ರ ದ್ವಿತೀಯಾರ್ಧಕ್ಕೆ ಆಸ್ತಿ ಸಲಹಾ ಸಂಸ್ಥೆ ನೈಟ್‌ ಫ್ರ್ಯಾಂಕ್‌ ವರದಿ: ಮನೆಗಳ ಬೆಲೆಯಲ್ಲಿ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 12 ಜನವರಿ 2020, 19:50 IST
Last Updated 12 ಜನವರಿ 2020, 19:50 IST
home
home   

ಬೆಂಗಳೂರು: ರಿಯಲ್ ಎಸ್ಟೇಟ್‌ ಚಟುವಟಿಕೆಗಳ ಪ್ರಮುಖ ಕೇಂದ್ರವಾಗಿರುವ ಬೆಂಗಳೂರಿನಲ್ಲಿ ಮನೆಗಳಿಗೆ ಬೇಡಿಕೆ ಹೆಚ್ಚಾಗುತ್ತಿರುವುದರಿಂದ ಸಹಜವಾಗಿಯೇ ಬೆಲೆಯಲ್ಲಿಯೂ ಏರಿಕೆ ಆಗುತ್ತಿದೆ.

ಪ್ರಮುಖ 8 ನಗರಗಳ ವಸತಿ ಮತ್ತು ಕಚೇರಿ ಮಾರುಕಟ್ಟೆಯ ಕುರಿತು ಆಸ್ತಿ ಸಲಹಾ ಸಂಸ್ಥೆ ನೈಟ್‌ ಫ್ರ್ಯಾಂಕ್‌ ಸಂಸ್ಥೆಯು ಬಿಡುಗಡೆ ಮಾಡಿರುವ 2019ರ ದ್ವಿತೀಯಾರ್ಧದ (ಜುಲೈ–ಡಿಸೆಂಬರ್‌) ವರದಿಯಿಂದ ಇದು ತಿಳಿದುಬಂದಿದೆ.

ಕಚೇರಿ ಸ್ಥಳಾವಕಾಶ ಗುತ್ತಿಗೆ ನೀಡುವುದರಲ್ಲಿ ಬೆಂಗಳೂರು ನಗರವು ಮುಂಚೂಣಿ ಕಾಯ್ದುಕೊಂಡಿದೆ. 8 ನಗರಗಳ ಒಟ್ಟಾರೆ ಗುತ್ತಿಗೆ ಪಾಲಿನಲ್ಲಿ ಶೇ 25ರಷ್ಟನ್ನು ಬೆಂಗಳೂರು ಹೊಂದಿದೆ. ಹೆಬ್ಬಾಳ, ಮಾರತಹಳ್ಳಿ ಮತ್ತು ಸರ್ಜಾಪುರ ಹೊರ ವರ್ತುಲ ರಸ್ತೆಗಳ ಸಮೀಪದಲ್ಲಿ ಕಚೇರಿ ಸ್ಥಳಾವಕಾಶಕ್ಕೆ ಬೇಡಿಕೆ ಹೆಚ್ಚಿದೆ.

ADVERTISEMENT

ವಸತಿ ಮಾರಾಟವು ಶೇ 10ರಷ್ಟು ಏರಿಕೆಯಾಗಿದ್ದರೆ, ಹೊಸ ಯೋಜನೆಗಳ ಬೆಳವಣಿಗೆ ಶೇ 9ರಷ್ಟು ಜಿಗಿತ ಕಂಡಿದೆ.ಮೆಟ್ರೊ ಕಾಮಗಾರಿಯಿಂದ ಪೂರ್ವ ಬೆಂಗಳೂರಿನಲ್ಲಿ ಮನೆಗಳ ಬೆಲೆ
ಶೇ 3 ರಿಂದ ಶೇ 7ರಷ್ಟು ಹೆಚ್ಚಳವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.