ಬೆಂಗಳೂರು: ಖಾಸಗಿ ವಲಯದ ಕೋಟಕ್ ಮಹೀಂದ್ರಾ ಬ್ಯಾಂಕ್, 3ನೆ ತ್ರೈಮಾಸಿಕದಲ್ಲಿ ₹ 1,291 ಕೋಟಿ ನಿವ್ವಳ ಲಾಭ ಗಳಿಸಿದೆ. ಒಂದು ವರ್ಷದ ಹಿಂದಿನ ಲಾಭಕ್ಕೆ ಹೋಲಿಸಿದರೆ ಈ ಬಾರಿ ಶೇ 23ರಷ್ಟು ಏರಿಕೆ ದಾಖಲಿಸಿದೆ. ಗರಿಷ್ಠ ಪ್ರಮಾಣದಲ್ಲಿ ಸಾಲ ನೀಡಿರು
ವುದು ಮತ್ತು ವರಮಾನ ಹೆಚ್ಚಳದ ಕಾರಣಕ್ಕೆ ಲಾಭದ ಪ್ರಮಾಣ ಹೆಚ್ಚಳಗೊಂಡಿದೆ.
‘ನಿವ್ವಳ ಬಡ್ಡಿ ವರಮಾನವು ಶೇ 23ರಷ್ಟು ಹೆಚ್ಚಳಗೊಂಡು ₹ 2,939 ಕೋಟಿಗೆ ತಲುಪಿದೆ’ ಎಂದು ಜಂಟಿ ವ್ಯವಸ್ಥಾಪಕ ನಿರ್ದೇಶಕ ದೀಪಕ್ ಗುಪ್ತಾ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.