ADVERTISEMENT

ಭೂಸುಧಾರಣೆಗೆ ಸಿಐಐ ಒತ್ತಾಯ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2025, 11:42 IST
Last Updated 10 ಆಗಸ್ಟ್ 2025, 11:42 IST
ಸಿಐಐ ಲೋಗೊ
ಸಿಐಐ ಲೋಗೊ   

ನವದೆಹಲಿ: ಭಾರತವು ಜಾಗತಿಕ ಮಟ್ಟದಲ್ಲಿ ತಯಾರಿಕಾ ಕೇಂದ್ರವಾಗಿ ಬೆಳೆಯಬೇಕು ಎಂದಾದರೆ  ಸಮಗ್ರ ಸ್ವರೂಪದ ಭೂಸುಧಾರಣೆಯ ಅಗತ್ಯ ಇದೆ ಎಂದು ಭಾರತೀಯ ಕೈಗಾರಿಕಾ ಮಹಾಸಂಘ (ಸಿಐಐ) ಹೇಳಿದೆ.

ಸಮನ್ವಯದ ಆಧಾರದಲ್ಲಿ, ಸಹಮತದ ಆಧಾರದಲ್ಲಿ ಸುಧಾರಣೆಗಳನ್ನು ಜಾರಿಗೆ ತರಲು ಜಿಎಸ್‌ಟಿ ಮಂಡಳಿಯ ಮಾದರಿಯಲ್ಲಿ ಇದಕ್ಕೂ ಒಂದು ಮಂಡಳಿಯನ್ನು ರಚಿಸಬೇಕು. ಮುದ್ರಾಂಕ ಶುಲ್ಕವು ಭಾರತದಾದ್ಯಂತ ಒಂದೇ ಆಗಿರಬೇಕು, ಅದು ಶೇ 3–5ರ ಪ್ರಮಾಣದಲ್ಲಿ ಇರಬೇಕು ಎಂದು ಸಿಐಐ ಹೇಳಿದೆ.

ವಿವಿಧ ದೇಶಗಳು ಜಾರಿಗೆ ತರುತ್ತಿರುವ ಮಾರುಕಟ್ಟೆ ರಕ್ಷಣೆಯ ಕ್ರಮಗಳು ಹಾಗೂ ವಾಣಿಜ್ಯ ಸಮರವು ಸವಾಲನ್ನು ಸೃಷ್ಟಿಸುತ್ತದೆಯಾದರೂ, ಭಾರತವು ಸ್ಥಿರವಾದ ನೀತಿಗಳನ್ನು ಹೊಂದಿರುವ ಕಾರಣಕ್ಕೆ ದೇಶವು ಮುಂದೆಯೂ ಹೂಡಿಕೆಯನ್ನು ಆಕರ್ಷಿಸಲಿದೆ ಎಂದು ಅದು ಅಭಿಪ್ರಾಯ ವ್ಯಕ್ತಪಡಿಸಿದೆ. 

ADVERTISEMENT

ಭೂಸುಧಾರಣಾ ಕಾರ್ಯತಂತ್ರವು ದೇಶ ತಯಾರಿಕಾ ಸಾಮರ್ಥ್ಯವನ್ನು ಹೆಚ್ಚು ಮಾಡುವುದಷ್ಟೇ ಅಲ್ಲದೆ, ದೇಶದ ಬಗ್ಗೆ ಹೂಡಿಕೆದಾರರಿಗೆ ಇರುವ ವಿಶ್ವಾಸವನ್ನು ಕೂಡ ಹೆಚ್ಚಿಸುತ್ತದೆ, ಗ್ರಾಮೀಣ ಪ್ರದೇಶಗಳ ಅಭಿವೃದ್ಧಿ ಸಾಧ್ಯತೆಯನ್ನು ಹೆಚ್ಚಿಸುತ್ತದೆ, ಎಲ್ಲರನ್ನೂ ಒಳಗೊಳ್ಳುವ ಬೆಳವಣಿಗೆಗೆ ನೆರವಾಗುತ್ತದೆ ಎಂದು ಸಿಐಐ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.