ADVERTISEMENT

ಸುಲಭ ಗೃಹ ಸಾಲ ನೀಡಲು ಒಪ್ಪಂದ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2019, 19:06 IST
Last Updated 5 ಮಾರ್ಚ್ 2019, 19:06 IST
ಎಲ್‌ಐಸಿ ಎಚ್‌ಎಫ್‌ಎಲ್‌ನ ಸಿಇಒ ವಿನಯ್‌ ಶಾ ಮತ್ತು ‘ಐಎಂಜಿಸಿ’ಯ ಸಿಇಒ ಮಹೇಶ್‌ ಮಿಶ್ರಾ ಅವರು ಒಪ್ಪಂದದ ದಾಖಲೆ ಪತ್ರ ವಿನಿಮಯ ಮಾಡಿಕೊಂಡರು
ಎಲ್‌ಐಸಿ ಎಚ್‌ಎಫ್‌ಎಲ್‌ನ ಸಿಇಒ ವಿನಯ್‌ ಶಾ ಮತ್ತು ‘ಐಎಂಜಿಸಿ’ಯ ಸಿಇಒ ಮಹೇಶ್‌ ಮಿಶ್ರಾ ಅವರು ಒಪ್ಪಂದದ ದಾಖಲೆ ಪತ್ರ ವಿನಿಮಯ ಮಾಡಿಕೊಂಡರು   

ಮುಂಬೈ: ಸುಲಭವಾಗಿ ಗೃಹ ಸಾಲ ನೀಡುವ ಉದ್ದೇಶಕ್ಕೆ ಎಲ್‌ಐಸಿ ಹೌಸಿಂಗ್‌ ಫೈನಾನ್ಸ್‌ (ಎಲ್‌ಐಸಿಎಚ್‌ಎಫ್‌ಎಲ್‌), ಇಂಡಿಯಾ ಮಾರ್ಟಗೇಜ್‌ ಗ್ಯಾರಂಟಿ ಕಾರ್ಪೊರೇಷನ್‌ (ಐಎಂಜಿಸಿ) ಜತೆ ಒಪ್ಪಂದ ಮಾಡಿಕೊಂಡಿದೆ.

ಈ ಒಪ್ಪಂದದ ಫಲವಾಗಿ ಹೆಚ್ಚು ಜನರಿಗೆ ಗೃಹ ವಿತರಿಸಲು ಮತ್ತು ಮಾರುಕಟ್ಟೆ ವಿಸ್ತರಿಸಲು ‘ಎಲ್‌ಐಸಿಎಚ್‌ಎಫ್‌ಎಲ್‌’ಗೆ ನೆರವಾಗಲಿದೆ.

‘ಒಪ್ಪಂದದಿಂದಾಗಿ, ಸಾಲಗಾರರ ಅರ್ಹತಾ ಮಾನದಂಡ ಹೆಚ್ಚಳ, ಮರುಪಾವತಿ ಅವಧಿ ಹೆಚ್ಚಳ, ಇತರ ಕಾರಣಗಳಿಗೆ ಸಾಲ ನಿರಾಕರಿಸುವ ನಿರ್ಬಂಧಗಳನ್ನು ಸಡಿಲುಗೊಳಿಸಲು ಸಾಧ್ಯವಾಗಲಿದೆ’ ಎಂದು ಎಲ್‌ಐಸಿ ಎಚ್‌ಎಫ್‌ಎಲ್‌ನ ಸಿಇಒ ವಿನಯ್‌ ಶಾ ಹೇಳಿದ್ದಾರೆ.

ADVERTISEMENT

‘ಅಡಮಾನ ಸಾಲ ಸುಸ್ತಿಯಾದ ಪ್ರಕರಣಗಳಲ್ಲಿ ಹಣಕಾಸು ಸಂಸ್ಥೆಗಳಿಗೆ ಪರಿಹಾರ ಒದಗಿಸುವ ಅಡಮಾನ ಖಾತರಿ ಸೌಲಭ್ಯವನ್ನು ‘ಐಎಂಜಿಸಿ’ ಒದಗಿಸಲಿದೆ’ ಎಂದು ‘ಐಎಂಜಿಸಿ’ಯ ಸಿಇಒ ಮಹೇಶ್‌ ಮಿಶ್ರಾ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.