ADVERTISEMENT

ಲಾಯಲ್ ಟೆಕ್ಸ್‌ಟೈಲ್‌ ಮಿಲ್ಸ್‌ನಿಂದ ಮರು ಬಳಕೆಯ ಪಿಪಿಇ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 9 ಜುಲೈ 2020, 16:20 IST
Last Updated 9 ಜುಲೈ 2020, 16:20 IST
ಮುಖಗವಸು
ಮುಖಗವಸು   

ಬೆಂಗಳೂರು: ಲಾಯಲ್ ಟೆಕ್ಸ್‌ಟೈಲ್‌ ಮಿಲ್ಸ್ ಕೊರೊನಾ–2 ವೈರಾಣು ನಿರೋಧಕ ಮರು ಬಳಸಬಹುದಾದ ವೈಯಕ್ತಿಕ ಸುರಕ್ಷಾ ಸಾಧನ (ಪಿಪಿಇ), ಮುಖಗವಸು ಮತ್ತು ಸುರಕ್ಷಾ ಫ್ಯಾಷನ್ ದಿರಿಸುಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ.

ರಿಲಯನ್ಸ್ ಇಂಡಸ್ಟ್ರೀಸ್‌ನ ಅಂಗಸಂಸ್ಥೆಯಾಗಿರುವಸುರಕ್ಷಿತ ವಸ್ತ್ರ ತಯಾರಿಸುವ ಆರ್‌ ಇಲಾನ್‌ ಮತ್ತು ಸ್ವಿಟ್ಜರ್ಲೆಂಡ್‌ನ ತಂತ್ರಜ್ಞಾನ ಸಂಸ್ಥೆ ಹೈಕ್ಯೂ ವೈರೊಬ್ಲಾಕ್‌ ಸಹಭಾಗಿತ್ವದಲ್ಲಿ ಈ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಿ ಬಿಡುಗಡೆ ಮಾಡಲಾಗಿದೆ. ಈ ‘ಪಿಪಿಇ’ ವಿಶ್ವದ ಮೊಟ್ಟಮೊದಲ ಮರುಬಳಕೆಯ ಪಿಪಿಪಿ ಎಂದು ಕಂಪನಿ ಹೇಳಿಕೊಂಡಿದೆ. ಈ ಪಿಪಿಇ ಉತ್ಪನ್ನಗಳನ್ನು ಹತ್ತು ಬಾರಿ ತೊಳೆದು ಸ್ಯಾನಿಟೈಸ್ ಮಾಡಬಹುದಾಗಿದೆ.

’ಈ ಉತ್ಪನ್ನಗಳ ತಯಾರಿಕೆಯಲ್ಲಿ ಆರ್‌ ಇಲಾನ್‌ ತಯಾರಿಸುವ ಫೀಲ್ ಫ್ರೆಷ್ ಫೈಬರ್ ಬಳಸಲಾಗಿದೆ. ಇದು ವೈರಾಣು ಅಥವಾ ಬ್ಯಾಕ್ಟೀರಿಯಾ ಬೆಳವಣಿಗೆ ತಡೆಯುತ್ತದೆ. ಈ ವಸ್ತ್ರವನ್ನು ಹೈಕ್ಯೂವಿನ ವೈರೊಬ್ಲಾಕ್‌ ತಂತ್ರಜ್ಞಾನದಿಂದ ಸಂಸ್ಕರಿಸಲಾಗಿದೆ’ ಎಂದು ಲಾಯಲ್ ಟೆಕ್ಸ್‌ಟೈಲ್‌ ಮಿಲ್ಸ್‌ನ ಅಧ್ಯಕ್ಷೆ ವಲ್ಲಿ ಎಂ.ರಾಮಸ್ವಾಮಿ ಹೇಳಿದ್ದಾರೆ. ವಿಡಿಯೊ ಕಾನ್‌ಫೆರನ್ಸ್‌ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು.

ADVERTISEMENT

ಮೂರು ಹಂತದ ಸುರಕ್ಷತಾ ತಂತ್ರಜ್ಞಾನ ಬಳಸಿ ಈ ಉತ್ಪನ್ನಗಳ ತಯಾರಿಕೆ ಬಗ್ಗೆ ಫೆಬ್ರುವರಿಯಲ್ಲಿಯೇ ಕಂಪನಿ ಕಾರ್ಯಪ್ರವೃತ್ತವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.