ADVERTISEMENT

ಲುಲು ಮಾಲ್‌ನಲ್ಲಿ ರಿಯಾಯಿತಿ ಕೊಡುಗೆಗಳು

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2022, 16:11 IST
Last Updated 2 ಮಾರ್ಚ್ 2022, 16:11 IST
   

ಬೆಂಗಳೂರು: ನಗರದ ಲುಲು ಮಾಲ್‌ನಲ್ಲಿ ಮಾರ್ಚ್‌ 10ರವರೆಗೆ ಹಲವು ಬಗೆಯ ರಿಯಾಯಿತಿಗಳು ಲಭ್ಯವಿರಲಿವೆ. ಹೈಪರ್‌ ಮಾರ್ಕೆಟ್‌, ಲಗೇಜ್, ಫ್ಯಾಷನ್ ಮತ್ತು ಕನೆಕ್ಟ್‌ಗಳಲ್ಲಿ ರಿಯಾಯಿತಿ ಕೊಡುಗೆಗಳು ಇರಲಿವೆ.

ಲುಲು ಫ್ಯಾಷನ್ ಸ್ಟೋರ್‌ನಲ್ಲಿ ಆಕರ್ಷಕ ದರದಲ್ಲಿ ಉತ್ಪನ್ನಗಳ ಮಾರಾಟ ಇರಲಿದೆ. ಎಲೆಕ್ಟ್ರಾನಿಕ್ಸ್ ಉಪಕರಣಗಳು ವಿಶೇಷ ದರದಲ್ಲಿ ಮಾರಾಟಕ್ಕೆ ಇರಲಿವೆ. ಸ್ಮಾರ್ಟ್‌ಫೋನ್, ಕಂಪ್ಯೂಟರ್, ಮ್ಯೂಸಿಕ್ ಸಿಸ್ಟಂ ಸೇರಿದಂತೆ ಹಲವು ಬಗೆಯ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳು ಲಭ್ಯವಿರಲಿವೆ ಎಂದು ಪ್ರಕಟಣೆ ತಿಳಿಸಿದೆ.

ದಿನಸಿ, ಹಣ್ಣುಗಳು, ತರಕಾರಿಗಳ ಮೇಲೆ ಕೊಡುಗೆಗಳು ಇರಲಿವೆ. ಅರ್ಮಾನಿ, ಗೂಚಿ ಮತ್ತು ಪೊಲೀಸ್ ಬ್ರ್ಯಾಂಡ್‌ನ ಕನ್ನಡಕಗಳ ಮೇಲೆ, ಲಗೇಜ್‌ ಬ್ಯಾಗ್‌ಗಳ ಮೇಲೆ ಶೇಕಡ 25ರವರೆಗೆ ರಿಯಾಯಿತಿ ಸಿಗಲಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.