ನವದೆಹಲಿ: ₹10 ಲಕ್ಷಕ್ಕೂ ಹೆಚ್ಚು ಮೌಲ್ಯದ ಐಷಾರಾಮಿ ಉತ್ಪನ್ನಗಳ ಖರೀದಿಗೆ ಇನ್ನು ಮುಂದೆ ಗ್ರಾಹಕರು ಹೆಚ್ಚುವರಿಯಾಗಿ ಶೇ 1ರಷ್ಟು ತೆರಿಗೆ ಪಾವತಿಸಬೇಕಿದೆ. ಈ ಉತ್ಪನ್ನಗಳ ಮಾರಾಟದ ವೇಳೆಯೇ ಖರೀದಿದಾರರಿಂದ ಈ ತೆರಿಗೆ ಮೊತ್ತವನ್ನು ಆದಾಯ ತೆರಿಗೆ ಇಲಾಖೆಯು ಸಂಗ್ರಹಿಸಲಿದೆ.
ಮೂಲದಲ್ಲೇ ತೆರಿಗೆ ಸಂಗ್ರಹದ (ಟಿಸಿಎಸ್) ಈ ನಿಯಮವು ಏಪ್ರಿಲ್ 22ರಿಂದಲೇ ಜಾರಿಗೆ ಬಂದಿದೆ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ.
2024ರ ಹಣಕಾಸು ಕಾಯ್ದೆ ಅಡಿಯಲ್ಲಿ ಐಷಾರಾಮಿ ಉತ್ಪನ್ನಗಳಿಗೆ ಟಿಸಿಎಸ್ ಅನ್ವಯವಾಗುವುದನ್ನು ಜಾರಿಗೆ ತರಲಾಗಿದೆ.
ಕೈಗಡಿಯಾರ, ವರ್ಣಚಿತ್ರಗಳು, ಶಿಲ್ಪಗಳು, ಪ್ರಾಚೀನ ವಸ್ತುಗಳು, ನಾಣ್ಯ, ಅಂಚೆಚೀಟಿಗಳು, ವಿಹಾರ ನೌಕೆ, ಹೆಲಿಕಾಪ್ಟರ್, ಹ್ಯಾಂಡ್‌ಬ್ಯಾಂಗ್, ಸನ್‌ಗ್ಲಾಸ್, ಕ್ರೀಡಾ ಉಡುಪು ಮತ್ತು ಪರಿಕರಗಳು, ರೇಸ್ ಅಥವಾ ಪೋಲೊ ಕ್ರೀಡೆಗಾಗಿ ಖರೀದಿಸುವ ಕುದುರೆ, ಹೋಮ್ ಥಿಯೇಟರ್ ಪರಿಕರಗಳಿಗೆ ಈ ತೆರಿಗೆ ಅನ್ವಯಿಸಲಿದೆ ಎಂದು ಇಲಾಖೆ ತಿಳಿಸಿದೆ.
ಉತ್ಪನ್ನಗಳ ಖರೀದಿ ಸಮಯದಲ್ಲಿಯೇ ಗ್ರಾಹಕರಿಂದ ಈ ತೆರಿಗೆ ಸಂಗ್ರಹಿಸಲಾಗುತ್ತದೆ. ಐ.ಟಿ ರಿಟರ್ನ್ಸ್‌ನಲ್ಲಿ ಈ ತೆರಿಗೆ ಮೊತ್ತವನ್ನು ಸರಿಹೊಂದಿಸಿಕೊಳ್ಳಲು ಅವರಿಗೆ ಅವಕಾಶವಿದೆ ಎಂದು ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.