ADVERTISEMENT

ಮಹೀಂದ್ರಾ: ‘ಮರಾಜೊ’ ಬಿಡುಗಡೆ

ಬಹು ನಿರೀಕ್ಷಿತ ಮಲ್ಟಿ ಯುಟಿಲಿಟಿ ವೆಹಿಕಲ್

ಜಯಸಿಂಹ ಆರ್.
Published 3 ಸೆಪ್ಟೆಂಬರ್ 2018, 19:30 IST
Last Updated 3 ಸೆಪ್ಟೆಂಬರ್ 2018, 19:30 IST
ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಪವನ್‌ ಗೋಯೆಂಕಾ ಮತ್ತು ಕಾರ್ಯನಿರ್ವಾಹಕ ಅಧ್ಯಕ್ಷ ಆನಂದ್ ಮಹೀಂದ್ರಾ ಅವರು ಹೊಸ ಎಂಯುವಿ ಬಿಡುಗಡೆ ಮಾಡಿದರು
ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಪವನ್‌ ಗೋಯೆಂಕಾ ಮತ್ತು ಕಾರ್ಯನಿರ್ವಾಹಕ ಅಧ್ಯಕ್ಷ ಆನಂದ್ ಮಹೀಂದ್ರಾ ಅವರು ಹೊಸ ಎಂಯುವಿ ಬಿಡುಗಡೆ ಮಾಡಿದರು   

ನಾಸಿಕ್: ಮಹೀಂದ್ರಾ ಕಂಪನಿಯು ಬಹು ನಿರೀಕ್ಷಿತ ಮಲ್ಟಿ ಯುಟಿಲಿಟಿ ವೆಹಿಕಲ್ (ಎಂಯುವಿ) ‘ಮರಾಜೊ’ವನ್ನು ಸೋಮವಾರ ಇಲ್ಲಿ ದೇಶಿ ಮಾರುಕಟ್ಟೆಗೆ ಬಿಡುಗಡೆ ಮಾಡಿತು.

ಎಂಜಿನ್, ಟ್ರಾನ್ಸ್‌ಮಿಷನ್, ಛಾಸಿಸ್ ಸೇರಿದಂತೆ ‘ಮಜಾರೋ’ವನ್ನು ಸಂಪೂರ್ಣ ಹೊಸದಾಗಿ ಅಭಿವೃದ್ಧಿಪಡಿಸಲಾಗಿದೆ. ‘ಮರಾಜೊಗೆಂದೇ ಹಲವು ಹೊಸ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲಾಗಿದೆ. ಅವುಗಳಲ್ಲಿ 11 ಹೊಸ ಅನ್ವೇಷಣೆಗಳಿಗೆ ಪೇಟೆಂಟ್ ಪಡೆಯಲು ಅರ್ಜಿ ಸಲ್ಲಿಸಲಾಗಿದೆ ಎಂದು ಕಂಪನಿ ಹೇಳಿದೆ.

ಮರಾಜೊ ಎಂ2, ಎಂ4, ಎಂ6 ಮತ್ತು ಎಂ8 ಎಂಬ ನಾಲ್ಕು ಅವತರಣಿಕೆಗಳಲ್ಲಿ ಲಭ್ಯವಿದೆ. ಎಲ್ಲಾ ಅವತರಣಿಕೆಗಳಲ್ಲೂ ಡ್ರೈವರ್ ಮತ್ತು ಪ್ಯಾಸೆಂಜರ್ ಏರ್‌ಬ್ಯಾಗ್‌ಗಳು, ನಾಲ್ಕು ಚಕ್ರಗಳಿಗೂ ಡಿಸ್ಕ್‌ ಬ್ರೇಕ್‌ ಲಭ್ಯವಿದೆ. ಜತೆಗೆ ಎರಡನೇ ಮತ್ತು ಮೂರನೇ ಸಾಲಿನ ಸೀಟ್‌ಗಳಿಗೆ ರೂಫ್ ಮೌಂಟೆಡ್ ಎಸಿ (ಹವಾನಿಯಂತ್ರಣ) ವೆಂಟ್‌ ಅಳವಡಿಸಲಾಗಿದೆ.

ADVERTISEMENT

ಎಲ್ಲ ನಾಲ್ಕು ಅವತರಣಿಕೆಗಳೂ ಏಳು ಮತ್ತು ಎಂಟು ಸೀಟ್‌ಗಳಲ್ಲಿ ಲಭ್ಯವಿವೆ. ಮೊದಲ ಮತ್ತು ಎರಡನೇ ಸಾಲಿನ ಸೀಟುಗಳನ್ನು ಮುಂಬದಿಗೆ -ಹಿಂಬದಿಗೆ ಸರಿಸಲು ಅವಕಾಶವಿದೆ. ಇದರಿಂದ ಮೂರೂ ಸಾಲುಗಳಲ್ಲಿ ಪ್ರಯಾಣಿಕರಿಗೆ ಹೆಚ್ಚು ಸ್ಥಳಾವಕಾಶ ಸಿಗಲಿದೆ.

ಸದ್ಯಕ್ಕೆ ಡೀಸೆಲ್ ಎಂಜಿನ್‌ ಮತ್ತು ಮ್ಯಾನುಯಲ್ ಟ್ರಾನ್ಸ್‌ಮಿಷನ್‌ ಸಂಯೋಜನೆಯಲ್ಲಿ ಮಾತ್ರ ಮಜಾರೊ ಸಿಗಲಿದೆ. ಪೆಟ್ರೋಲ್‌ ಎಂಜಿನ್ ಮತ್ತು ಆಟೊಮ್ಯಾಟಿಕ್ ಟ್ರಾನ್ಸ್‌ಮಿಷನ್‌ಗಳು ಇನ್ನೂ ಅಭಿವೃದ್ಧಿ ಹಂತದಲ್ಲಿವೆ ಎಂದು ಕಂಪನಿ ಹೇಳಿದೆ.

(ವರದಿಗಾರ, ಕಂಪನಿಯ ಆಹ್ವಾನದ ಮೇರೆಗೆ ನಾಸಿಕ್‌ಗೆ ತೆರಳಿದ್ದರು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.