ಬೆಂಗಳೂರು: ಉಡುಪಿ ಜಿಲ್ಲೆಯಲ್ಲಿ ಬೆಳೆಯುವ ಮಲ್ಲಿಗೆಯ ಬೆಳೆಗಾರರು ಮತ್ತು ಖರೀದಿದಾರರ ಅನುಕೂಲಕ್ಕಾಗಿ ಮೊಬೈಲ್ ಆ್ಯಪ್ ಅಭಿವೃದ್ಧಿಪಡಿಸಲಾಗಿದೆ.
ಉಡುಪಿ ಮಲ್ಲಿಗೆ ಬೆಳೆಗಾರರ ಸಂಘವು (ಯುಜೆಎಫ್‌ಸಿಎ) ಪ್ರತಿ ದಿನ ಪ್ರಕಟಿಸುವ ಮೂಲ ದರದ ವಿವರ ಇಲ್ಲಿ ಲಭ್ಯ ಇರಲಿದೆ. ಹೆಚ್ಚು ಫಸಲು ಪಡೆಯಲು, ಮಲ್ಲಿಗೆಯ ಸಸಿಗಳನ್ನು ಹವಾಮಾನ ವೈಪರೀತ್ಯಗಳಿಂದ ಸಂರಕ್ಷಿಸುವ ವಿಧಾನಗಳ ವಿವರಗಳೂ ಇದರಲ್ಲಿ ಲಭ್ಯ ಇರಲಿವೆ. ಆ್ಯಪ್ ಅನ್ನು ಗೂಗಲ್ ಪ್ಲೇ ಸ್ಟೋರ್‌ನಿಂದ (https://play.google.com/store/apps/details?id=com.tackyant.mallige) ಪಡೆದುಕೊಳ್ಳಬಹುದು.
ಪ್ರವಾಸಿ ತಾಣಗಳಲ್ಲಿ ಲೊಹೊನೊ ಸ್ಟೇಸ್
ವಿಲಾಸಿ ಗೃಹ ನಿರ್ಮಾಣ ಸಂಸ್ಥೆ ಇಸ್ಪರವ, ‘ಲೊಹೊನೊ ಸ್ಟೇಸ್’ ಹೆಸರಿನ ಹಾಲಿಡೇ ಹೋಮ್ಸ್ ನಿರ್ಮಾಣದ ಮೂಲಕ ಆತಿಥ್ಯ ಕ್ಷೇತ್ರ ಪ್ರವೇಶಿಸಿದೆ.
‘ಪ್ರಮುಖ ಪ್ರವಾಸಿ ತಾಣಗಳಲ್ಲಿ ‘ಲೊಹೊನೊ ಸ್ಟೇ’ ಮೂಲಕ ಪ್ರವಾಸಿಗರು ಬಯಸುವ ವಿಲಾಸಿ ಸೌಲಭ್ಯದ ಸ್ವಂತ ಮನೆಯ ಅನುಭವ ನೀಡುವ ಆತಿಥ್ಯ ಲಭ್ಯ ಇರಲಿದೆ. ಇಂತಹ ಐಷಾರಾಮಿ ಅನುಕೂಲತೆಯ 250 ಮನೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ’ ಎಂದು ಕಂಪನಿಯ ಸಿಇಒ ನಿಭರಂತ್ ಶಾ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.