ADVERTISEMENT

ಚೇತರಿಕೆ ಕಂಡಷೇರುಪೇಟೆ

ಪಿಟಿಐ
Published 7 ಜನವರಿ 2020, 19:01 IST
Last Updated 7 ಜನವರಿ 2020, 19:01 IST

ಮುಂಬೈ : ಷೇರುಪೇಟೆಗಳ ಎರಡು ದಿನಗಳ ನಕಾರಾತ್ಮಕ ಓಟ ಮಂಗಳವಾರ ಅಂತ್ಯಗೊಂಡಿದೆ.

ಅಮೆರಿಕ–ಇರಾನ್‌ ಸಂಘರ್ಷವು ತುಸು ತಗ್ಗಿರುವುದರಿಂದ ಷೇರುಪೇಟೆಗಳಲ್ಲಿ ಮಾರಾಟದ ಒತ್ತಡ ಕಡಿಮೆಯಾಗಿದೆ.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ 193 ಅಂಶ ಹೆಚ್ಚಾಗಿ 40,869 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 60 ಅಂಶ ಹೆಚ್ಚಾಗಿ 12,053 ಅಂಶಗಳಿಗೆ ತಲುಪಿತು.

ADVERTISEMENT

ರೂಪಾಯಿ: ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್‌ ಎದುರು ರೂಪಾಯಿ ಮೌಲ್ಯ 11 ಪೈಸೆ ಹೆಚ್ಚಾಗಿ ಒಂದು ಡಾಲರ್‌ಗೆ ₹ 71.82ರಂತೆ ವಿನಿಮಯಗೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.