ಬೆಂಗಳೂರು: ಮುಂಬೈ ಮೆಟ್ರೊಪಾಲಿಟನ್ ಪ್ರಾದೇಶಿಕ ಅಭಿವೃದ್ಧಿ ಪ್ರಾಧಿಕಾರಕ್ಕೆ (ಎಂಎಂಆರ್‌ಡಿಎ) ಮೆಘಾ ಎಂಜಿನಿಯರಿಂಗ್ ಆ್ಯಂಡ್ ಇನ್‌ಫ್ರಾಸ್ಟ್ರಕ್ಚರ್ ಸಂಸ್ಥೆಯು (ಎಂಇಐಎಲ್) ನೀಡಿದ್ದ ಬ್ಯಾಂಕ್ ಗ್ಯಾರಂಟಿಗೆ ಸಂಬಂಧಿಸಿದಂತೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಂಬೈ ಹೈಕೋರ್ಟ್ ವಜಾಗೊಳಿಸಿದೆ.
ಬೋರಿವಾಲಿ ಮತ್ತು ಥಾಣೆ ನಡುವಿನ ಅವಳಿ ಟ್ಯೂಬ್ ರಸ್ತೆ ಸುರಂಗ ಯೋಜನೆಯನ್ನು ಎಂಇಐಎಲ್‌ಗೆ ನೀಡುವ ಕುರಿತು ಪ್ರಾಧಿಕಾರವು ನಕಲಿ ಬ್ಯಾಂಕ್ ಗ್ಯಾರಂಟಿ ಸ್ವೀಕರಿಸಿದೆ ಎಂದು ಆರೋಪಿಸಲಾಗಿತ್ತು.
ಟೆಂಡರ್ ವೇಳೆ ಎಂಇಐಎಲ್ ಸಲ್ಲಿಸಿದ ಯೂರೊ ಎಕ್ಸಿಮ್ ಬ್ಯಾಂಕ್ ಮೂಲದ ಬ್ಯಾಂಕ್ ಗ್ಯಾರಂಟಿಗಳು ಮಾನ್ಯವಾಗಿಲ್ಲ ಎಂದು ಆರೋಪಿಸಿ, ಹೈದರಾಬಾದ್ ಮೂಲದ ಪತ್ರಕರ್ತ ರವಿ ಪ್ರಕಾಶ್ ಎಂಬುವರು ಅರ್ಜಿ ಸಲ್ಲಿಸಿದ್ದರು. ಈ ಪ್ರಕರಣದ ಬಗ್ಗೆ ಸಿಬಿಐನಿಂದ ತನಿಖೆ ನಡೆಸಬೇಕು ಎಂದು ಕೋರಿದ್ದರು.
ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಅಲೋಕ್ ಅರಾಧೆ ಮತ್ತು ನ್ಯಾಯಮೂರ್ತಿ ಭಾರತಿ ಡಾಂಗ್ರೆ ಅವರಿದ್ದ ವಿಭಾಗೀಯ ಪೀಠವು, ಟೆಂಡರ್ ಸಲ್ಲಿಕೆ ವೇಳೆ ಎಂಇಐಎಲ್ ಅಕ್ರಮ ಎಸಗಿಲ್ಲ ಎಂದು ಆದೇಶದಲ್ಲಿ ತಿಳಿಸಿದೆ.
ಎಂಇಐಎಲ್ ಪರವಾಗಿ ವಾದ ಮಂಡಿಸಿದ ಮಾಜಿ ಅಟಾರ್ನಿ ಜನರಲ್ ಮುಕುಲ್ ರೋಹಟಗಿ ಹಾಗೂ ಹಿರಿಯ ವಕೀಲ ಡೇರಿಯಸ್ ಖಂಬಟಾ, ಅರ್ಜಿದಾರರು ನಿರ್ಣಾಯಕ ಸಂಗತಿಗಳನ್ನು ಮರೆಮಾಚಿದ್ದಾರೆ. ನ್ಯಾಯಾಲಯವನ್ನು ಗುರಿಯಾಗಿಸಿಕೊಂಡು ಸಾಮಾಜಿಕ ಮಾಧ್ಯಮಗಳಲ್ಲಿ ಮಾನಹಾನಿಕರ ಪೋಸ್ಟ್ ಮಾಡಿದ್ದು, ನ್ಯಾಯಾಂಗ ನಿಂದನೆ ಮಾಡಿದ್ದಾರೆ ಎಂದು ಗಮನ ಸೆಳೆದರು.
ಕಿಯಾ ದರ ಹೆಚ್ಚಳ:
ಏಪ್ರಿಲ್ 1ರಿಂದ ಜಾರಿಗೆ ಬರುವಂತೆ ಎಲ್ಲಾ ಮಾದರಿಯ ಕಾರುಗಳ ಬೆಲೆಯನ್ನು ಶೇ 3ರ ವರೆಗೆ ಹೆಚ್ಚಿಸುವುದಾಗಿಕಿಯಾ ಇಂಡಿಯಾ ಕಂಪನಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.