ಬೆಂಗಳೂರು: ರಾಜ್ಯದ ಕೈಗಾ ಸ್ಥಾವರದಲ್ಲಿ ಪರಮಾಣು ವಿದ್ಯುತ್ ಉತ್ಪಾದಿಸುವ ಯೋಜನೆಗೆ ಸಂಬಂಧಿಸಿದ ₹12,800 ಕೋಟಿ ಮೊತ್ತದ ಟೆಂಡರ್ ಆದೇಶವನ್ನು ಮೇಘಾ ಎಂಜಿನಿಯರಿಂಗ್ ಮತ್ತು ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್‌ಗೆ (ಎಂಇಐಎಲ್) ಹಸ್ತಾಂತರಿಸಲಾಗಿದೆ.
ಕೈಗಾದ 5 ಮತ್ತು 6ನೇ ಘಟಕದಲ್ಲಿ ತಲಾ 700 ಮೆಗಾವಾಟ್ ವಿದ್ಯುತ್ ಉತ್ಪಾದಿಸುವ ಯೋಜನೆ ಇದಾಗಿದೆ. ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (ಎನ್‌ಪಿಸಿಐಎಲ್) ಈ ಟೆಂಡರ್ ನೀಡಿದೆ ಎಂದು ಎಂಇಐಎಲ್ ತಿಳಿಸಿದೆ.
ಎನ್‌ಪಿಸಿಐಎಲ್‌ನ ಮುಂಬೈ ಪ್ರಧಾನ ಕಚೇರಿಯಲ್ಲಿ ಎಂಇಐಎಲ್ ನಿರ್ದೇಶಕ (ಯೋಜನೆಗಳು) ಸಿ.ಎಚ್.ಪಿ. ಸುಬ್ಬಯ್ಯ ಮತ್ತು ಅವರ ತಂಡಕ್ಕೆ ಔಪಚಾರಿಕವಾಗಿ ಟೆಂಡರ್ ಆದೇಶವನ್ನು ಹಸ್ತಾಂತರಿಸಲಾಯಿತು ಎಂದು ತಿಳಿಸಿದೆ.
ಇದು ಎನ್‌ಪಿಸಿಐಎಲ್ ಈವರೆಗಿನ ಅತಿದೊಡ್ಡ ಟೆಂಡರ್ ಆಗಿದೆ. ದೇಶದ ಇಂಧನ ಭವಿಷ್ಯ ರೂಪಿಸಲು ಸಹಾಯ ಮಾಡುವ ಕ್ಷೇತ್ರವಾದ ಪರಮಾಣು ಇಂಧನ ವಲಯಕ್ಕೆ ಎಂಇಐಎಲ್‌ನ ಚೊಚ್ಚಲ ಹೆಜ್ಜೆಯಾಗಿದೆ ಎಂದು ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.