ADVERTISEMENT

‘ಸಣ್ಣ ಸಾಲಕ್ಕೆ ದುಬಾರಿ ಬಡ್ಡಿ ಸಲ್ಲದು’: ಆರ್‌ಬಿಐ

ಪಿಟಿಐ
Published 14 ಮಾರ್ಚ್ 2022, 16:30 IST
Last Updated 14 ಮಾರ್ಚ್ 2022, 16:30 IST
   

ಮುಂಬೈ (ಪಿಟಿಐ): ಸಣ್ಣ ಪ್ರಮಾಣದಲ್ಲಿ ಸಾಲ ವಿತರಿಸುವ ಸಂಸ್ಥೆಗಳು ದುಬಾರಿ ಬಡ್ಡಿ ದರ ವಿಧಿಸುವಂತಿಲ್ಲ ಎಂದು ಆರ್‌ಬಿಐ ಸೋಮವಾರ ಎಚ್ಚರಿಕೆ ನೀಡಿದೆ. ಸಾಲದ ಮೇಲಿನ ಬಡ್ಡಿ ಹಾಗೂ ಅದಕ್ಕೆ ಸಂಬಂಧಿಸಿದ ಶುಲ್ಕಗಳ ವಿಚಾರವಾಗಿ ಮಿತಿ ನಿಗದಿ ಮಾಡುವಂತೆಯೂ ಆರ್‌ಬಿಐ ಸೂಚಿಸಿದೆ.

ವಾರ್ಷಿಕ ₹ 3 ಲಕ್ಷದವರೆಗೆ ಆದಾಯ ಇರುವ ಕುಟುಂಬಕ್ಕೆ ಅಡಮಾನ ಇಲ್ಲದೆ ನೀಡುವ ಸಾಲವನ್ನು ಸಣ್ಣ ಪ್ರಮಾಣದ ಸಾಲ ಎಂದು ವರ್ಗೀಕರಿಸಲಾಗುತ್ತದೆ. ಸಾಲ ಕೊಡಲು ಕಾನೂನು ವ್ಯಾಪ್ತಿಯಲ್ಲಿ ಕೆಲಸ ನಿರ್ವಹಿಸುವ ಸಂಸ್ಥೆಗಳು ಸಾಲದ ಮೇಲಿನ ಬಡ್ಡಿ, ಶುಲ್ಕದ ಮಾಹಿತಿಯನ್ನು ಸಾಲ ಪಡೆಯುವವರಿಗೆ ನಿರ್ದಿಷ್ಟ ರೂಪದಲ್ಲಿ, ಸರಳವಾಗಿ ತಿಳಿಸಬೇಕು ಎಂದೂ ಆರ್‌ಬಿಐ ಹೇಳಿದೆ. ಮಾಹಿತಿ ಪತ್ರದಲ್ಲಿ ಇಲ್ಲದ, ಹೆಚ್ಚವರಿ ಶುಲ್ಕವನ್ನು ಸಂಗ್ರಹಿಸಲು ಅವಕಾಶ ಇಲ್ಲ.

ಸಣ್ಣ ಪ್ರಮಾಣದ ಸಾಲವನ್ನು ಅವಧಿಗೆ ಮುನ್ನವೇ ಹಿಂದಿರುಗಿಸಿದರೆ ಅದಕ್ಕೆ ದಂಡ ವಿಧಿಸುವಂತಿಲ್ಲ. ತಡವಾಗಿ ಪಾವತಿ ಮಾಡಿದರೆ, ಬಾಕಿ ಉಳಿದಿರುವ ಮೊತ್ತಕ್ಕೆ ಮಾತ್ರ ದಂಡ ವಿಧಿಸಬೇಕು ಎಂದು ಆರ್‌ಬಿಐ ಹೇಳಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.