ADVERTISEMENT

ಟಿವಿಎಸ್‌ ಗ್ರೀನ್‍ರೈಡ್ ಅಭಿಯಾನ ಮುಕ್ತಾಯ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2023, 16:04 IST
Last Updated 18 ಡಿಸೆಂಬರ್ 2023, 16:04 IST
<div class="paragraphs"><p>ಟಿವಿಎಸ್‌ ಗ್ರೀನ್‍ರೈಡ್ ಅಭಿಯಾನದಲ್ಲಿ ಪಾಲ್ಗೊಂಡಿದ್ದ ನಟ ಮಿಲಿಂದ್ ಸೋಮನ್ </p></div>

ಟಿವಿಎಸ್‌ ಗ್ರೀನ್‍ರೈಡ್ ಅಭಿಯಾನದಲ್ಲಿ ಪಾಲ್ಗೊಂಡಿದ್ದ ನಟ ಮಿಲಿಂದ್ ಸೋಮನ್

   

-ಪ್ರಜಾವಾಣಿ ಚಿತ್ರ

ಬೆಂಗಳೂರು: ನಟ ಮಿಲಿಂದ್ ಸೋಮನ್ ಅವರ ಸಹಯೋಗದಡಿ ಹಮ್ಮಿಕೊಂಡಿದ್ದ ಟಿವಿಎಸ್‌ ಮೋಟಾರ್‌ ಕಂಪನಿಯ ಚೊಚ್ಚಲ ಎಲೆಕ್ಟ್ರಿಕ್ ಸ್ಕೂಟರ್‌ ಆದ ಟಿವಿಎಸ್ ಐಕ್ಯೂಬ್‌ನ ಗ್ರೀನ್‍ರೈಡ್ ಅಭಿಯಾನವು ಸೋಮವಾರ ನಗರದಲ್ಲಿ ಮುಕ್ತಾಯವಾಯಿತು.‌

ADVERTISEMENT

ಪುಣೆಯಲ್ಲಿ ವಾರದ ಹಿಂದೆ ಈ ಅಭಿಯಾನ ಆರಂಭವಾಗಿತ್ತು. ಪರಿಸರ ಸ್ನೇಹಿ ಆಶಯದಡಿ ಸುಸ್ಥಿರ ಸಾರಿಗೆ ವಿಧಾನ ಕುರಿತು ಜಾಗೃತಿ ಮೂಡಿಸುವುದು ಈ ಅಭಿಯಾನದ ಗುರಿಯಾಗಿದೆ. 

ಟಿವಿಎಸ್ ಐಕ್ಯೂಬ್‍ನಲ್ಲಿ ಪ್ರಯಾಣ ಆರಂಭಿಸಿದ ಮಿಲಿಂದ್ ಅವರು, ಒಟ್ಟು 200 ಕಿ.ಮೀ. ದೂರವನ್ನು ಕ್ರಮಿಸಿದ್ದಾರೆ ಎಂದು ಕಂಪನಿಯ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.