ADVERTISEMENT

ಎಂಆರ್‌ಪಿಎಲ್‌: ಲಾಭದಲ್ಲಿ ಇಳಿಕೆ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2018, 18:48 IST
Last Updated 15 ನವೆಂಬರ್ 2018, 18:48 IST

ಮಂಗಳೂರು: ಮಂಗಳೂರು ರಿಫೈನರಿ ಆಂಡ್‌ ಪೆಟ್ರೋಕೆಮಿಕಲ್ಸ್‌ ಲಿಮಿಟೆಡ್‌ (ಎಂಆರ್‌ಪಿಎಲ್‌) ಎರಡನೇ ತ್ರೈಮಾಸಿಕದಲ್ಲಿ ₹81 ಕೋಟಿ ನಿವ್ವಳ ಲಾಭ ಗಳಿಸಿದೆ. ಕಳೆದ ವರ್ಷದ ಲಾಭ ₹ 478 ಕೋಟಿಯಾಗಿತ್ತು.

ಕಳೆದ ಮೂರು ತಿಂಗಳ ಅವಧಿಯಲ್ಲಿ ಒಟ್ಟು ₹17,733 ಕೋಟಿ ವಹಿವಾಟು ನಡೆಸುವ ಮೂಲಕ ಶೇ 43ರಷ್ಟು ಪ್ರಗತಿ ಸಾಧಿಸಿದೆ. ₹7,876 ಕೋಟಿ ರಫ್ತು ಮಾಡಲಾಗಿದ್ದು, ಶೇ 143 ರಷ್ಟು ಸಾಧನೆ ಮಾಡಲಾಗಿದೆ. 39 ಲಕ್ಷ ಟನ್‌ ಕಚ್ಚಾ ತೈಲ ಸಂಸ್ಕರಣೆ ಮಾಡಲಾಗಿದೆ.

ಹಣಕಾಸು ವರ್ಷದ ಅರ್ಧ ವಾರ್ಷಿಕ ವಹಿವಾಟಿನಲ್ಲಿ ಶೇ 28 ರಷ್ಟು ಪ್ರಗತಿ ದಾಖಲಿಸಿದೆ. ಒಟ್ಟಾರೆ ₹34,316 ಕೋಟಿ ವಹಿವಾಟು ನಡೆಸಲಾಗಿದ್ದು, ₹281 ಕೋಟಿ ನಿವ್ವಳ ಲಾಭ ಗಳಿಸಿದೆ. ಕಳೆದ ವರ್ಷದ ಇದರ ಪ್ರಮಾಣ ₹ 712 ಕೋಟಿ ಆಗಿತ್ತು. ಕಳೆದ ವರ್ಷಕ್ಕೆ ಹೋಲಿಸಿದಲ್ಲಿ, ಅರ್ಧವಾರ್ಷಿಕ ಲಾಭದಲ್ಲಿ ಶೇ 54 ರಷ್ಟು ಇಳಿಕೆ ಕಂಡುಬಂದಿದೆ.

ADVERTISEMENT

ಮಾರುಕಟ್ಟೆಯಲ್ಲಿ ಹಿಡಿತವನ್ನು ಇನ್ನಷ್ಟು ಬಿಗಿಗೊಳಿಸಿದ್ದು, ಪೆಟ್‌ಕೋಟ್‌, ಸಲ್ಫರ್‌, ಪಾಲಿಪ್ರೊಪಲೈನ್‌ಗಳನ್ನು ನೇರವಾಗಿ ಮಾರುಕಟ್ಟೆ ಮಾಡುತ್ತಿದೆ. ಮಾರುಕಟ್ಟೆಯ ಪ್ರಮಾಣವನ್ನು ಇನ್ನಷ್ಟು ವಿಸ್ತರಿಸುವ ನಿಟ್ಟಿನಲ್ಲಿ ಪಾಲಿಪ್ರೊಪಲೈನ್‌ ಉತ್ಪನ್ನಗಳ ಗ್ರೇಡ್ ಅನ್ನು ಹೆಚ್ಚಿಸುತ್ತಿದೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.