ADVERTISEMENT

ಎಂಎಸ್‌ಎಂಇ, ಖಾದಿ ಉತ್ಪನ್ನಮಾರಾಟಕ್ಕೆ ಜಾಲತಾಣ: ಗಡ್ಕರಿ

ಸಂಸತ್‌ನಲ್ಲಿ ಆರ್ಥಿಕ ವಿಚಾರ

​ಪ್ರಜಾವಾಣಿ ವಾರ್ತೆ
Published 4 ಜುಲೈ 2019, 19:22 IST
Last Updated 4 ಜುಲೈ 2019, 19:22 IST

ನವದೆಹಲಿ (ಪಿಟಿಐ): ‘ಕಿರು, ಸಣ್ಣ ಮತ್ತು ಮಧ್ಯಮ ಪ್ರಮಾಣ ಉದ್ಯಮಗಳು (ಎಂಎಸ್ಎಂಇ) ಮತ್ತು ಖಾದಿ ಉತ್ಪನ್ನಗಳ ಮಾರಾಟಕ್ಕೆ ಜಾಲತಾಣ ಬಿಡುಗಡೆ ಮಾಡಲಾಗುವುದು’ ಎಂದು ಎಂಎಸ್‌ಎಂಇ ಸಚಿವ ನಿತಿನ್‌ ಗಡ್ಕರಿ ತಿಳಿಸಿದ್ದಾರೆ.

‘ಅಲಿಬಾಬಾ ಮತ್ತು ಅಮೆಜಾನ್‌ ಕಂಪನಿಗಳು ಎಂಎಸ್‌ಎಂಇಗಳಿಗೆ ಜಾಗತಿಕ ವೇದಿಕೆಯನ್ನು ಕಲ್ಪಿಸಲಿವೆ. ಖಾದಿ ಮತ್ತು ಎಂಎಸ್‌ಎಂಇ ಉದ್ಯಮಗಳಿಗಾಗಿ ಜಾಲತಾಣ ರೂಪಿಸುವ ಕಾರ್ಯದಲ್ಲಿ ನಿರತರಾಗಿದ್ದೇವೆ’ ಎಂದು ಲೋಕಸಭೆಗೆ ಮಾಹಿತಿ ನೀಡಿದ್ದಾರೆ.

‘ದೇಶದ ಒಟ್ಟಾರೆ ಆಂತರಿಕ ಪ್ರಗತಿಗೆ (ಜಿಡಿಪಿ) ಎಂಎಸ್‌ಎಂಇ ಶೇ 29ರಷ್ಟು ಕೊಡುಗೆ ನೀಡುತ್ತಿದೆ. ಇದನ್ನು ಐದು ವರ್ಷಗಳಲ್ಲಿ ಶೇ 50ಕ್ಕೆ ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರ ಹಲವು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. 15 ಕೋಟಿ ಉದ್ಯೋಗ ಸೃಷ್ಟಿಸುವ ನಿಟ್ಟಿನಲ್ಲಿಯೂ ಕ್ರಮಗಳನ್ನು ಜಾರಿಗೊಳಿಸಲಾಗುವುದು.

ADVERTISEMENT

ಈ ಗುರಿಯ ಬಗ್ಗೆ ಪ್ರತಿಪಕ್ಷದ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದು, ಈ ಹಿಂದಿನ ಗುರಿ ಸಾಧನೆಯಾಗಿಲ್ಲ ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಗಡ್ಕರಿ, ‘ಗುರಿ ಸಾಧನೆಯಾಗಿಲ್ಲ ಎಂದರೆ ಪ್ರಶ್ನೆ ಮಾಡಿ. ರಸ್ತೆ ಸಾರಿಗೆ ಸಚಿವಾಲಯದಲ್ಲಿ ಹಾಕಿಕೊಂಡಿದ್ದ ಎಲ್ಲಾ ಗುರಿಗಳನ್ನೂ ಸಾಧಿಸಲಾಗಿದೆ. ಹಾಗೆಯೇ ಇಲ್ಲಿಯೂ ಸಾಧಿಸಲಾಗುವುದು’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.