ADVERTISEMENT

ಜಿಎಸ್‌ಟಿ ಹೊಸ ನಿಯಮ: ಎಂಎಸ್‌ಎಂಇ ಸಣ್ಣ ವಿತರಕರಿಗಿಲ್ಲ ಪರಿಣಾಮ

ಪಿಟಿಐ
Published 27 ಡಿಸೆಂಬರ್ 2020, 12:35 IST
Last Updated 27 ಡಿಸೆಂಬರ್ 2020, 12:35 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಪಾವತಿ ಮಾಡಬೇಕಿರುವ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮೊತ್ತದಲ್ಲಿ ಶೇಕಡ 1ರಷ್ಟು ಕಡ್ಡಾಯವಾಗಿ ನಗದು ರೂಪದಲ್ಲಿ ಇರಬೇಕು ಎಂಬ ನಿಯಮವು ಸಣ್ಣ ಉದ್ದಿಮೆಗಳು ಮತ್ತು ಸಣ್ಣ ವಿತರಕರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಹಣಕಾಸು ಸಚಿವಾಲಯದ ಮೂಲಗಳು ತಿಳಿಸಿವೆ.

ತಿಂಗಳಿಗೆ ₹ 50 ಲಕ್ಷ ಅಥವಾ ವಾರ್ಷಿಕ ₹ 6 ಕೋಟಿ ವಹಿವಾಟು ನಡೆಸುವ ಕಂಪನಿಗಳಿಗೆ ಮಾತ್ರವೇ ಈ ಹೊಸ ನಿಯಮ ಅನ್ವಯ ಆಗಲಿದೆ ಎಂದು ಹೇಳಿವೆ.

ನಕಲಿ ಇನ್‌ವಾಯ್ಸ್‌ ಸೃಷ್ಟಿಸಿ ತೆರಿಗೆ ವಂಚಿಸುವುದನ್ನು ತಡೆಯುವ ಉದ್ದೇಶದಿಂದ ನೇರ ತೆರಿಗೆ ಮತ್ತು ಕಸ್ಟಮ್ಸ್‌ನ ಕೇಂದ್ರೀಯ ಮಂಡಳಿಯು (ಸಿಬಿಐಸಿ) ಈ ನಿಯಮವನ್ನು ರೂಪಿಸಿದೆ. ಜನವರಿ 1ರಿಂದ ಜಿಎಸ್‌ಟಿ ಪಾವತಿಸಲು, ಇನ್‌ಪುಟ್‌ ಟ್ಯಾಕ್ಸ್‌ ಕ್ರೆಡಿಟ್‌ (ಐಟಿಸಿ) ಬಳಕೆಯು ಶೇ 99ಕ್ಕೆ ಮಿತಿಗೊಳ್ಳಲಿದೆ.

ADVERTISEMENT

ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಅಥವಾ ಪಾಲುದಾರ ₹ 1 ಲಕ್ಷಕ್ಕಿಂತ ಅಧಿಕ ಆದಾಯ ತೆರಿಗೆ ಪಾವತಿಸಿದಲ್ಲಿ ಅಥವಾ ₹ 1 ಲಕ್ಷಕ್ಕಿಂತ ಹೆಚ್ಚಿನ ತೆರಿಗೆ ಮರುಪಾವತಿ ಪಡೆದಲ್ಲಿ ಹೊಸ ನಿಯಮ ಅನ್ವಯಿಸುವುದಿಲ್ಲ. ಅದೇ ರೀತಿ ಸರ್ಕಾರಿ ಇಲಾಖೆಗಳು, ಪಿಎಸ್‌ಯುಗಳು ಹಾಗೂ ಸ್ಥಳೀಯ ಆಡಳಿತಗಳಿಗೆ ಸಹ ಅನ್ವಯ ಆಗುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.