ಯಾದಗಿರಿ ಎಪಿಎಂಸಿ ಆವರಣದಲ್ಲಿ ಶನಿವಾರ ಆವಕ ಆಗಿರುವ ಹೆಸರು ಕಾಳನ್ನು ಹಮಾಲಿಗಳು ಚೀಲದಲ್ಲಿ ತುಂಬಿಸಿದರು
ಯಾದಗಿರಿ: ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರಾಂಗಣದಲ್ಲಿ ಹೆಸರುಕಾಳಿಗೆ ಬಂಪರ್ ಬೆಲೆ ಬಂದಿದೆ. ಬೆಲೆಯು 10 ದಿನಗಳಲ್ಲಿ ಕ್ವಿಂಟಲ್‌ಗೆ ₹3,179 ಹೆಚ್ಚಾಗಿದೆ.
ಆಗಸ್ಟ್ 5ರಂದು ಹೆಸರುಕಾಳು ಕ್ವಿಂಟಲ್‌ಗೆ ಗರಿಷ್ಠ ದರ ₹6,531 ಇತ್ತು. ಆಗಸ್ಟ್ 16ಕ್ಕೆ ₹9,710ಕ್ಕೆ ಏರಿಕೆಯಾಗಿದೆ. ಇದು ಕೇಂದ್ರ ನಿಗದಿಪಡಿಸಿರುವ ಬೆಂಬಲ ಬೆಲೆಗಿಂತ (₹8,768) ಹೆಚ್ಚು. ಕಳೆದ ವರ್ಷ ಇದೇ ದಿನ (ಆ.16) ₹8,365 ಆಸುಪಾಸಿನಲ್ಲಿ ಹೆಸರುಕಾಳು ಮಾರಾಟ ಆಗಿತ್ತು.
ಹೆಸರುಕಾಳು ಆವಕ ಈಗ 2 ಸಾವಿರ ಕ್ವಿಂಟಲ್‌ಗೆ ತಲುಪಿದೆ. 11 ದಿನಗಳಲ್ಲಿ 13,302 ಕ್ವಿಂಟಲ್ ಹೆಸರು ಕಾಳು ಯಾದಗಿರಿ ಎಪಿಎಂಸಿಗೆ ಆವಕ ಆಗಿದೆ. ಯಾದಗಿರಿ ಜಿಲ್ಲೆ, ನೆರೆಯ ಜಿಲ್ಲೆಗಳು, ಪಕ್ಕದ ತೆಲಂಗಾಣ ರಾಜ್ಯದಿಂದಲೂ ಪೂರೈಕೆ ಆಗುತ್ತಿದೆ.
ವಾರದಿಂದ ಮಳೆ ಸುರಿಯುತ್ತಿದೆ. ಹೆಸರುಕಾಳುಗಳು ತೇವಾಂಶದಿಂದ ಕಪ್ಪಾಗಬಹುದು. ಮಳೆಗೂ ಮುನ್ನ ರಾಶಿಯಾಗಿರುವ ಗುಣಮಟ್ಟದ ಹೆಸರುಕಾಳಿಗೆ ಬೇಡಿಕೆ ಬಂದಿದೆ’ ಎಂದು ಸಹಾಯಕ ಕೃಷಿ ನಿರ್ದೇಶಕ ರಾಜಕುಮಾರ ‘ಪ್ರಜಾವಾಣಿ’ಗೆ ತಿಳಿಸಿದರು.
ಇನ್ನೂ ನಾಲ್ಕೈದು ದಿನ ಮಳೆ ಬಂದರೆ ಹೆಸರು ಕಾಳು ಕಪ್ಪಾಗುವ ಸಾಧ್ಯತೆ ಇದೆ. ಆಗ ದರದಲ್ಲಿ ವ್ಯತ್ಯಾಸಶಿವಕುಮಾರ ಎಪಿಎಂಸಿ ಕಾರ್ಯದರ್ಶಿ, ಯಾದಗಿರಿ
ಆಗಬಹುದು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.