ADVERTISEMENT

ಮುತ್ತೂಟ್‌ನಿಂದ ‘ಮಿಲಿಗ್ರಾಂ ಚಿನ್ನ ಕೊಡುಗೆ’ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2022, 12:58 IST
Last Updated 24 ಆಗಸ್ಟ್ 2022, 12:58 IST
ಮುತ್ತೂಟ್‌ ಮಿಲಿಗ್ರಾಂ ರಿವಾರ್ಡ್‌ ಕಾರ್ಯಕ್ರಮಕ್ಕೆ ಚಾಲನೆ ನೀಡುವ ಸಂದರ್ಭದಲ್ಲಿ ಡೆಪ್ಯುಟಿ ಜನರಲ್‌ ಮ್ಯಾನೇಜರ್‌ ಬಾಬು ಜಾನ್‌ ಮಲಾಯಿಲ್‌, ಕಾರ್ಯನಿರ್ವಾಹಕ ನಿರ್ದೇಶಕ ಕೆ.ಆರ್‌. ಬಿಜಮೋನ್‌, ವ್ಯವಸ್ಥಾಪಕ ನಿರ್ದೇಶಕ ಜಾರ್ಜ್‌ ಅಲೆಕ್ಸಾಂಡರ್‌ ಮುತ್ತೂಟ್‌ ಮತ್ತು ಸಿಎಫ್‌ಒ ಉಮ್ಮನ್‌ ಕೆ. ಮಾಮೆನ್‌ ಇದ್ದರು.

ಬೆಂಗಳೂರು: ಮುತ್ತೂಟ್‌ ಫೈನಾನ್ಸ್‌, ತನ್ನ ಗ್ರಾಹಕರಿಗೆ ‘ಮಿಲಿಗ್ರಾಂ ಕೊಡುಗೆ ಕಾರ್ಯಕ್ರಮ’ ಆರಂಭಿಸಿದೆ. ಮುತ್ತೂಟ್‌ ಸಮೂಹದೊಂದಿಗೆ ವ್ಯವಹರಿಸುವ ಗ್ರಾಹಕರಿಗೆ ಕನಿಷ್ಠ ಒಂದು ಮಿಲಿಗ್ರಾಂ ಚಿನ್ನವನ್ನು ಬಹುಮಾನವಾಗಿ ನೀಡಲಾಗುತ್ತದೆ. ಎರಡು ವರ್ಷಗಳ ಅವಧಿಯ ಈ ಕಾರ್ಯಕ್ರಮವು ಗ್ರಾಹಕರ ನಡುವೆ ಬಾಂಧವ್ಯ ಬಲಪಡಿಸುವ ಮತ್ತು ಗ್ರಾಹಕರನ್ನು ಸೆಳೆಯುವ ಗುರಿ ಹೊಂದಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಇದು 2022ರ ಏಪ್ರಿಲ್‌ 1ರಿಂದ ಎಲ್ಲ ವ್ಯವಹಾರಗಳಿಗೆ ಅನ್ವಯವಾಗುತ್ತದೆ.ಬೇರೆ ಗ್ರಾಹಕರನ್ನು ಪರಿಚಯಿಸುವ ವ್ಯವಹಾರದ (ರೆಫರಲ್‌) ಪ್ರತಿ ಗ್ರಾಹಕರು 20 ಮಿಲಿಗ್ರಾಂ ಚಿನ್ನ ಪಡೆಯಲಿದ್ದಾರೆ. ಈ ಕಾರ್ಯಕ್ರಮದ ಮೂಲಕ ಪ್ರತಿ ವರ್ಷ ₹ 50 ಕೋಟಿ ಮೌಲ್ಯದ ಚಿನ್ನವನ್ನು ಕೊಡುವೆ ನಿರೀಕ್ಷೆ ಇದೆ ಎಂದು ಹೇಳಿದೆ.

ದೇಶದಲ್ಲಿ ಇದೇ ಮೊದಲ ಬಾರಿಗೆ 24 ಕ್ಯಾರಟ್‌ ಬಂಗಾರ ನೀಡುವ ವಿಶಿಷ್ಟ ಉಪಕ್ರಮವನ್ನೂ ಆರಂಭ ಮಾಡಿರುವುದಾಗಿ ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ ಕಂಪನಿಯ ವೆಬ್‌ಸೈಟ್‌ಗೆ ಭೇಟಿ ನೀಡಲು ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.