ನವದೆಹಲಿ (ಪಿಟಿಐ): ಚಿಲ್ಲರೆ ಹೂಡಿಕೆದಾರರ ಸಕ್ರಿಯ ಭಾಗವಹಿಸುವಿಕೆಯಿಂದದೇಶದ ಮ್ಯೂಚುವಲ್ ಫಂಡ್ ಸಂಸ್ಥೆಗಳ ನಿರ್ವಹಣೆ
ಯಲ್ಲಿ ಇರುವ ಸಂಪತ್ತು ಮೌಲ್ಯ
ವೃದ್ಧಿಯಾಗುತ್ತಿದೆ.
2019ರ ಏಪ್ರಿಲ್–ಜೂನ್ ಅಂತ್ಯಕ್ಕೆ ಸಂಸ್ಥೆಗಳ ನಿರ್ವಹಣಾ ಸಂಪತ್ತು ಶೇ 4.14ರಷ್ಟು ಹೆಚ್ಚಾಗಿ ₹ 25.49 ಲಕ್ಷ ಕೋಟಿಗಳಿಗೆ ತಲುಪಿದೆ. 2019ರ ಜನವರಿ–ಮಾರ್ಚ್ ಅವಧಿಯಲ್ಲಿ
₹ 24.48 ಲಕ್ಷ ಕೋಟಿ ಇತ್ತು ಎಂದು ಮ್ಯೂಚುವಲ್ ಫಂಡ್ ಭಾರತೀಯ ಸಂಸ್ಥೆಗಳ ಒಕ್ಕೂಟ (ಎಎಂಎಫ್ಐ) ಮಾಹಿತಿ ನೀಡಿದೆ.
2018ರ ಏಪ್ರಿಲ್–ಜೂನ್ ಅವಧಿಯಲ್ಲಿ ಸಂಪತ್ತು ಮೌಲ್ಯ
₹ 23.04 ಲಕ್ಷ ಕೋಟಿಗಳಷ್ಟಿತ್ತು. ಗಾತ್ರದ ಲೆಕ್ಕದಲ್ಲಿಎಚ್ಡಿಎಫ್ಸಿ ಎಂಎಫ್ ಮೊದಲ ಸ್ಥಾನದಲ್ಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.