ADVERTISEMENT

ಏಪ್ರಿಲ್‌ನಿಂದ ನೈಸರ್ಗಿಕ ಅನಿಲ ಅಗ್ಗ

ಪಿಟಿಐ
Published 23 ಫೆಬ್ರುವರಿ 2020, 15:31 IST
Last Updated 23 ಫೆಬ್ರುವರಿ 2020, 15:31 IST
ಒಎನ್‌ಜಿಸಿ ಘಟಕದ ಎದುರು ಸಿಬ್ಬಂದಿ –ರಾಯಿಟರ್ಸ್ ಚಿತ್ರ
ಒಎನ್‌ಜಿಸಿ ಘಟಕದ ಎದುರು ಸಿಬ್ಬಂದಿ –ರಾಯಿಟರ್ಸ್ ಚಿತ್ರ   

ನವದೆಹಲಿ: ನೈಸರ್ಗಿಕ ಅನಿಲದ ಬೆಲೆಯು ಏಪ್ರಿಲ್‌ನಿಂದ ಶೇ 25ರಷ್ಟು ಅಗ್ಗವಾಗುವ ಸಾಧ್ಯತೆ ಇದೆ.

ಜಾಗತಿಕ ಮಾರುಕಟ್ಟೆಯಲ್ಲಿ ಬೆಲೆ ತಗ್ಗಿರುವುದರಿಂದ ದೇಶಿ ಮಾರುಕಟ್ಟೆಯಲ್ಲಿಯೂ ಬೆಲೆ ಅಗ್ಗವಾಗಲಿದೆ. ಸರ್ಕಾರಿ ಸ್ವಾಮ್ಯದ ತೈಲ ಮತ್ತು ನೈಸರ್ಗಿಕ ಅನಿಲ ನಿಗಮ (ಒಎನ್‌ಜಿಸಿ) ಮತ್ತು ಆಯಿಲ್‌ ಇಂಡಿಯಾ, ದೇಶದಲ್ಲಿ ಉತ್ಪಾದನೆಯಾಗುವ ನೈಸರ್ಗಿಕ ಅನಿಲದಲ್ಲಿ ಗರಿಷ್ಠ ಪಾಲು ಹೊಂದಿವೆ.

ರಸಗೊಬ್ಬರ ತಯಾರಿಕೆ, ವಿದ್ಯುತ್‌ ಉತ್ಪಾದನೆ, ವಾಹನಗಳಲ್ಲಿ ಬಳಸುವ ಸಾಂದ್ರೀಕೃತ ನೈಸರ್ಗಿಕ ಅನಿಲ (ಸಿಎನ್‌ಜಿ) ಮತ್ತು ಕೊಳವೆಮಾರ್ಗದ ಮೂಲಕ ಮನೆಗಳಿಗೆ ಪೂರೈಸುವ ಗೃಹ ಬಳಕೆಯ ಅಡುಗೆ ಅನಿಲದ ಬೆಲೆಯನ್ನು ಇನ್ನು ಮುಂದೆ ಪ್ರತಿ ವರ್ಷ ಏಪ್ರಿಲ್‌ ಮತ್ತು ಅಕ್ಟೋಬರ್‌ನಲ್ಲಿ ಪರಿಷ್ಕರಿಸಲಾಗುವುದು.

ADVERTISEMENT

ಹಿಂದಿನ ವರ್ಷದ ಅಕ್ಟೋಬರ್‌ನಲ್ಲಿ ನೈಸರ್ಗಿಕ ಅನಿಲದ ಬೆಲೆಯನ್ನು ಶೇ 12.5ರಷ್ಟು ತಗ್ಗಿಸಲಾಗಿತ್ತು. ಈಗ ಮತ್ತೆ ಬೆಲೆ ಇಳಿಕೆಯಿಂದ ಒಎನ್‌ಜಿಸಿ ಮತ್ತು ರಿಲಯನ್ಸ್‌ ಇಂಡಸ್ಟ್ರೀಸ್‌ನ ವರಮಾನ ಕಡಿಮೆಯಾಗಲಿದೆ. ಒಎನ್‌ಜಿಸಿ ವರಮಾನವು ₹ 3,000 ಕೋಟಿಗಳಷ್ಟು ಕಡಿಮೆಯಾಗುವ ಅಂದಾಜಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.