ADVERTISEMENT

‘ಬ್ಯಾಂಕ್‌ಗೆ ಹೆಚ್ಚಿನ ಅಧಿಕಾರ’

ಎನ್‌ಪಿಎ: ಪರಿಷ್ಕೃತ ಸುತ್ತೋಲೆಗೆ ಐಬಿಎ ಪ್ರತಿಕ್ರಿಯೆ

​ಪ್ರಜಾವಾಣಿ ವಾರ್ತೆ
Published 8 ಜೂನ್ 2019, 16:30 IST
Last Updated 8 ಜೂನ್ 2019, 16:30 IST
   

ನವದೆಹಲಿ (ಪಿಟಿಐ):ವಸೂಲಾಗದ ಸಾಲದ (ಎನ್‌ಪಿಎ) ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಆರ್‌ಬಿಐ ಹೊರಡಿಸಿರುವ ಪರಿಷ್ಕೃತ ಸುತ್ತೋಲೆಯನ್ನು ಭಾರತೀಯ ಬ್ಯಾಂಕ್‌ಗಳ ಒಕ್ಕೂಟ (ಐಬಿಎ) ಸ್ವಾಗತಿಸಿದೆ.

‘ಆರ್‌ಬಿಐನ ಕ್ರಮದಿಂದ ಬ್ಯಾಂಕ್‌ಗಳಿಗೆ ನಿರ್ಧಾರಗಳನ್ನು ತೆಗೆದುಕೊಳ್ಳಲು ಹೆಚ್ಚಿನ ಸ್ವಾತಂತ್ರ್ಯ ಸಿಗಲಿದೆ’ ಎಂದು ಒಕ್ಕೂಟದ ಅಧ್ಯಕ್ಷ ಸುನಿಲ್‌ ಮೆಹ್ತಾ ಅಭಿಪ್ರಾಯಪಟ್ಟಿದ್ದಾರೆ.

ಹೊಸ ಮಾರ್ಗದರ್ಶಿ ಸೂತ್ರಗಳಿಂದಾಗಿ ಈ ಹಿಂದಿನ ಸಾಲ ವಸೂಲಾತಿ ಪ್ರಕ್ರಿಯೆಗಳೆಲ್ಲ ರದ್ದಾಗಲಿವೆ.

ADVERTISEMENT

ಸಾಲ ಬಾಕಿ ಉಳಿಸಿಕೊಂಡಿರುವ ಖಾತೆಯನ್ನು ಎನ್‌ಪಿಎ ಎಂದು ಪರಿಗಣಿಸಲು ಬ್ಯಾಂಕ್‌ಗಳಿಗೆ 30 ದಿನಗಳ ಕಾಲಾವಕಾಶ ಸಿಗಲಿದೆ.

‘ಬ್ಯಾಂಕ್‌ಗಳು ಆಡಳಿತ ಮಂಡಳಿ ಮಟ್ಟದಲ್ಲಿಯೇ ಪರಿಹಾರ ಕಂಡುಕೊಳ್ಳಬಹುದಾಗಿದೆ. ಪ್ರಕರಣವನ್ನು ಹಣಕಾಸು ನಷ್ಟ ಮತ್ತು ದಿವಾಳಿ ಕಾಯ್ದೆಯಡಿ (ಐಬಿಸಿ) ಇತ್ಯರ್ಥಪಡಿಸಬೇಕೆ ಅಥವಾ ಹೊರಗಡೆಯೇ ಬಗೆಹರಿಸಿಕೊಳ್ಳಬಹುದೇ ಎನ್ನುವ ನಿರ್ಧಾರ ಕೈಗೊಳ್ಳುವ ಅಧಿಕಾರ ಬ್ಯಾಂಕ್‌ಗಳ ಕೈಯಲ್ಲಿದೆ’ ಎಂದು ಕಾರ್ಪೊರೇಟ್‌ ವ್ಯವಹಾರಗಳ ಕಾರ್ಯದರ್ಶಿ ಇಂಜೆತಿ ಶ್ರೀನಿವಾಸ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.