ADVERTISEMENT

ತೈಲ ಬೆಲೆ: ಜನಹಿತ ಗಮನಿಸಿ ಕ್ರಮ

ಪಿಟಿಐ
Published 8 ಮಾರ್ಚ್ 2022, 16:01 IST
Last Updated 8 ಮಾರ್ಚ್ 2022, 16:01 IST

ನವದೆಹಲಿ (ಪಿಟಿಐ): ‘ಇಂಧನ ದರ ಎಷ್ಟಿರಬೇಕು ಎಂಬುದನ್ನು ತೈಲ ಮಾರಾಟ ಕಂಪನಿಗಳು ತೀರ್ಮಾನಿಸುತ್ತವೆ. ಜನಸಾಮಾನ್ಯರ ಹಿತವನ್ನು ಗಮನದಲ್ಲಿ ಇರಿಸಿಕೊಂಡು ಕೇಂದ್ರ ಸರ್ಕಾರವು ನಿರ್ಧಾರ ಕೈಗೊಳ್ಳುತ್ತದೆ’ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರದೀಪ್‌ ಸಿಂಗ್ ಪುರಿ ಹೇಳಿದ್ದಾರೆ.

‘ದೇಶದಲ್ಲಿ ಕಚ್ಚಾ ತೈಲದ ಕೊರತೆ ಆಗುವುದಿಲ್ಲ ಎಂದು ಭರವಸೆ ನೀಡುತ್ತಿದ್ದೇನೆ’ ಎಂದು ಅವರು ಹೇಳಿದ್ದಾರೆ. ದೇಶದಲ್ಲಿ ಚುನಾವಣೆಯ ಕಾರಣಕ್ಕೆ ತೈಲೋತ್ಪನ್ನಗಳ ಬೆಲೆ ತಗ್ಗಿಸಲಾಗಿತ್ತು ಎಂಬ ಆರೋಪದಲ್ಲಿ ಹುರುಳಿಲ್ಲ ಎಂದು ಕೂಡ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT