ADVERTISEMENT

ಕ್ಲೆನ್‌ಪ್ಯಾಕ್ಸ್‌ನಲ್ಲಿ ಸೌರಶಕ್ತಿ ಘಟಕ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2019, 18:48 IST
Last Updated 10 ಏಪ್ರಿಲ್ 2019, 18:48 IST
ಕ್ಲೆನ್‌ಪ್ಯಾಕ್ಸ್ ಸಂಸ್ಥೆಯ ನಿರ್ದೇಶಕ ಸುನಿಲ್ ಸಿಪಾನಿ, ಕಾರ್ಯನಿರ್ವಾಹಕ ನಿರ್ದೇಶಕ ವಿಮಲ್ ಸಿಪಾನಿ ಮತ್ತು ಆರ್ಬ್ ಎನರ್ಜಿ ಸಂಸ್ಥೆಯ ಸಿಇಒ ಡೇಮಿಯನ್ ಮಿಲ್ಲರ್‌ ಸೌರಶಕ್ತಿ ಬಗ್ಗೆ ಮಾಹಿತಿ ನೀಡಿದರು.
ಕ್ಲೆನ್‌ಪ್ಯಾಕ್ಸ್ ಸಂಸ್ಥೆಯ ನಿರ್ದೇಶಕ ಸುನಿಲ್ ಸಿಪಾನಿ, ಕಾರ್ಯನಿರ್ವಾಹಕ ನಿರ್ದೇಶಕ ವಿಮಲ್ ಸಿಪಾನಿ ಮತ್ತು ಆರ್ಬ್ ಎನರ್ಜಿ ಸಂಸ್ಥೆಯ ಸಿಇಒ ಡೇಮಿಯನ್ ಮಿಲ್ಲರ್‌ ಸೌರಶಕ್ತಿ ಬಗ್ಗೆ ಮಾಹಿತಿ ನೀಡಿದರು.   

ಬೆಂಗಳೂರು: ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಕೈಗಾರಿಕಾ ಘಟಕಗಳನ್ನು ಹೊಂದಿರುವ ಕ್ಲೆನ್‌ಪ್ಯಾಕ್ಸ್‌ ಸಂಸ್ಥೆಗಾಗಿ ಆರ್ಬ್ ಎನರ್ಜಿ ಸಂಸ್ಥೆಯುಮೂರನೇ ಹಂತದ 7.63 ಮೆಗಾವಾಟ್ ಸಾಮರ್ಥ್ಯದ ಸೌರಶಕ್ತಿ ಘಟಕ ನಿರ್ಮಾಣಕ್ಕೆ ಚಾಲನೆ ನೀಡಿದೆ.

ಈ ಹಂತದಲ್ಲಿ ಹಾಸನ, ಬೆಂಗಳೂರು ಮತ್ತು ತಮಿಳುನಾಡಿನ ಕೃಷ್ಣಗಿರಿಯಲ್ಲಿ ತಲಾ 3 ಮೆಗಾವಾಟ್ ಸಾಮರ್ಥ್ಯದ ಘಟಕಗಳನ್ನು ಆರಂಭಿಸಲಿದೆ.

ಸಂಸ್ಥೆಯು, ಮದ್ದೂರಿನಲ್ಲಿ 3.63 ಮೆಗಾವಾಟ್‌ ಮತ್ತು ಹಾಸನದಲ್ಲಿ 1 ಮೆಗಾವಾಟ್‌ ಸಾಮರ್ಥ್ಯದ ಮೇಲ್ಚಾವಣಿ ಸೌರಶಕ್ತಿ ಘಟಕಗಳನ್ನು ಹೊಂದಿದೆ.

ADVERTISEMENT

ಗೊಬ್ಬರ ಚೀಲಗಳ ತಯಾರಿಕೆ ಮತ್ತು ರಫ್ತು ಮಾಡುವ ಕ್ಲೆನ್‌ಪ್ಯಾಕ್ಸ್‌ಗೆ ಈ ಘಟಕದಿಂದ ವಾರ್ಷಿಕ ₹ 6.5 ಕೋಟಿಗಿಂತಲೂ ಹೆಚ್ಚು ಹಣ ಉಳಿತಾಯವಾಗಲಿದ್ದು, ಇದಕ್ಕಾಗಿ ಹೂಡಿದ ಬಂಡವಾಳ ಮೂರು ವರ್ಷಗಳಲ್ಲಿ ಹಿಂಪಡೆಯಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದೆ.

‘ವಾಣಿಜ್ಯ ಉದ್ದೇಶಗಳಿಗಾಗಿ ಮತ್ತು ಕೈಗಾರಿಕೆಗಳನ್ನು ನಡೆಸಲು ಪಡೆಯುವ ವಿದ್ಯುತ್‌ಗೆ ಪ್ರತಿ ಯೂನಿಟ್‌ಗೆ ₹ 7ರಿಂದ ₹ 9ರವರೆಗೆ ಪಾವತಿಸಬೇಕಾಗುತ್ತದೆ. ಇಂತಹ ಮೇಲ್ಚಾವಣಿ ಸೌರಶಕ್ತಿ ಘಟಕಗಳನ್ನು ಸ್ಥಾಪಿಸುವುದರಿಂದ ಕೈಗಾರಿಕೆಗಳಿಗೆ ಪ್ರಯೋಜನ ಆಗಲಿದೆ. ಇದು ಕೈಗಾರಿಕೆಗಳ ಅಭಿವೃದ್ಧಿಗೂ ನೆರವಾಗುತ್ತದೆ’ ಎಂದು ಆರ್ಬ್ ಎನರ್ಜಿ ಸಂಸ್ಥೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡೇಮಿಯರ್ ಮಿಲ್ಲರ್‌ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.