ನವದೆಹಲಿ: ದೇಶದ ಎರಡನೆ ಅತಿದೊಡ್ಡ ಐ.ಟಿ ಸಂಸ್ಥೆ ಇನ್ಫೊಸಿಸ್ನ ಸಿಇಒ ಸಲೀಲ್ ಪಾರೇಖ್ ಅವರು ಹಿಂದಿನ ಹಣಕಾಸು ವರ್ಷದಲ್ಲಿ ₹ 24.67 ಕೋಟಿಗಳಷ್ಟು ವೇತನ ಪ್ಯಾಕೇಜ್ ಪಡೆದಿದ್ದಾರೆ.
2018ರ ಜನವರಿಯಲ್ಲಿ ಸಿಇಒ ಆಗಿ ನೇಮಕಗೊಂಡಿರುವ ಪಾರೇಖ್, 2018–19ರಲ್ಲಿ ₹ 6.07 ಕೋಟಿ ಸ್ಥಿರ ವೇತನ, ₹ 10.96 ಕೋಟಿ ಬೋನಸ್, ₹ 7.64 ಕೋಟಿ ಮೊತ್ತದ ಷೇರು ಮತ್ತಿತರ ಹೆಚ್ಚುವರಿ ಪ್ರಯೋಜನಗಳ ರೂಪದಲ್ಲಿ ಒಟ್ಟಾರೆ ₹ 24.67 ಕೋಟಿ ವೇತನ ಭತ್ಯೆ ಪಡೆದುಕೊಂಡಿರುವುದು ಸಂಸ್ಥೆಯ ವಾರ್ಷಿಕ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಟಿಸಿಎಸ್ ಸಿಇಒ: ಟಾಟಾ ಕನ್ಸಲ್ಟನ್ಸಿ ಸರ್ವಿಸಸ್ನ (ಟಿಸಿಎಸ್) ಸಿಇಒ ರಾಜೇಶ್ ಗೋಪಿನಾಥ್ ಅವರು ₹ 16 ಕೋಟಿಗಳ ವೇತನ ಭತ್ಯೆಪಡೆದುಕೊಂಡಿದ್ದಾರೆ.
ಇವರ ವೇತನ ಪ್ಯಾಕೇಜ್ನಲ್ಲಿ ₹ 1.15 ಕೋಟಿ ಸಂಬಳ, ₹ 1.26 ಕೋಟಿ ಹೆಚ್ಚುವರಿ ಭತ್ಯೆ, ₹ 13ಕೋಟಿ ಕಮಿಷನ್ ಮತ್ತು ₹ 60 ಲಕ್ಷ ಇತರ ಭತ್ಯೆಗಳು ಸೇರಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.