ನವದೆಹಲಿ: ಪೇಟಿಎಂ ಕಂಪನಿಯ ₹ 18,300 ಕೋಟಿ ಮೊತ್ತದ ಐಪಿಒಗೆ ಎರಡನೇ ದಿನದ ಅಂತ್ಯಕ್ಕೆ ಒಟ್ಟು ಶೇಕಡ 48ರಷ್ಟು ಷೇರುಗಳಿಗೆ ಅರ್ಜಿ ಸಲ್ಲಿಕೆ ಆಗಿದೆ.
ಷೇರು ವಿನಿಮಯ ಕೇಂದ್ರದಲ್ಲಿ ಇರುವ ಮಾಹಿತಿಯ ಪ್ರಕಾರ, ಪೇಟಿಎಂನ ಮಾತೃಸಂಸ್ಥೆ ಒನ್97 ಕಮ್ಯುನಿಕೇಷನ್ಸ್ ಲಿಮಿಟೆಡ್‌ನ 4.83 ಕೋಟಿ ಷೇರುಗಳಲ್ಲಿ 2.34 ಕೋಟಿ ಷೇರುಗಳಿಗೆ ಬಿಡ್ ಸಲ್ಲಿಕೆ ಆಗಿದೆ.
ಸಣ್ಣ ಹೂಡಿಕೆದಾರರಿಗೆ 87.98 ಲಕ್ಷ ಷೇರುಗಳನ್ನು ಮೀಸಲಿಡಲಾಗಿದ್ದು, 1.08 ಷೇರುಗಳಿಗೆ ಅರ್ಜಿ ಸಲ್ಲಿಕೆ ಆಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.