ADVERTISEMENT

ಪಿಂಚಣಿ: ಪ್ರಮಾಣಪತ್ರ ಸಲ್ಲಿಸಲು ಫೆ. 28ರವರೆಗೆ ಅವಕಾಶ

ಪಿಟಿಐ
Published 20 ಡಿಸೆಂಬರ್ 2020, 15:02 IST
Last Updated 20 ಡಿಸೆಂಬರ್ 2020, 15:02 IST

ನವದೆಹಲಿ: ಕೇಂದ್ರ ಸರ್ಕಾರದಿಂದ ಪಿಂಚಣಿ ಪಡೆಯುವವರು ಜೀವಿತ ಪ್ರಮಾಣಪತ್ರವನ್ನು ಸಲ್ಲಿಸಲು ಫೆಬ್ರುವರಿ 28ರವರೆಗೂ ಅವಕಾಶ ಇದೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ತೋಮರ್ ಭಾನುವಾರ ತಿಳಿಸಿದ್ದಾರೆ.

‘ಪಿಂಚಣಿ ವಿತರಣೆ ಆಗುವ ಬ್ಯಾಂಕ್‌ಗಳಲ್ಲಿ ಜನಸಂದಣಿ ಉಂಟಾಗಿ, ಸಾಂಕ್ರಾಮಿಕ ಒಬ್ಬರಿಂದ ಇನ್ನೊಬ್ಬರಿಗೆ ಹರಡಬಾರದು ಎಂಬ ಉದ್ದೇಶದಿಂದ ಈ ತೀರ್ಮಾನ ಕೈಗೊಳ್ಳಲಾಗಿದೆ’ ಎಂದು ತೋಮರ್ ಹೇಳಿದ್ದಾರೆ. ಇದಲ್ಲದೆ, 80 ವರ್ಷಕ್ಕಿಂತ ಹೆಚ್ಚು ವಯಸ್ಸಾದವರಿಗೆ ಜೀವಿತ ಪ್ರಮಾಣಪತ್ರ ಸಲ್ಲಿಸಲು ಅಕ್ಟೋಬರ್‌ 1ರಿಂದಲೇ ವಿಶೇಷ ಸೌಲಭ್ಯ ಕಲ್ಪಿಸಲಾಗಿದೆ.

ಪಿಂಚಣಿ ಸಿಗುವುದು ಮುಂದುವರಿಯಬೇಕು ಎಂದಾದರೆ ಜೀವಿತ ಪ್ರಮಾಣಪತ್ರ ಸಲ್ಲಿಸುವುದು ಕಡ್ಡಾಯ. ಪಿಂಚಣಿದಾರರ ಮನೆಯಿಂದಲೇ ಈ ಪ್ರಮಾಣಪತ್ರ ಪಡೆದುಕೊಳ್ಳುವ ಕೆಲಸವನ್ನು ಈಗ ಇಂಡಿಯನ್ ಪೋಸ್ಟ್ ಪೇಮೆಂಟ್ಸ್‌ ಬ್ಯಾಂಕ್‌ ಅಂಚೆ ಸಿಬ್ಬಂದಿಯ ಮೂಲಕ ಮಾಡುತ್ತಿದೆ ಎಂದು ಅವರು ತಿಳಿಸಿದ್ದಾರೆ.

ADVERTISEMENT

ಜೀವಿತ ಪ್ರಮಾಣಪತ್ರವನ್ನು ಆ್ಯಂಡ್ರಾಯ್ಡ್‌ ಫೋನ್‌ ಮೂಲಕ ಡಿಜಿಟಲ್ ಸ್ವರೂಪದಲ್ಲಿ ಸಲ್ಲಿಸಲು ಅನುಕೂಲ ಆಗುವಂತೆ ಮಾಡುವ ಕೆಲಸವೂ ನಡೆದಿದೆ ಎಂದು ಸಚಿವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.