ADVERTISEMENT

ಪೆಪ್ಸಿಕೊ: ಆಲೂಗಡ್ಡೆ ತಳಿಯ ಹಕ್ಕುಸ್ವಾಮ್ಯ ರದ್ದು

ಏಜೆನ್ಸೀಸ್
Published 3 ಡಿಸೆಂಬರ್ 2021, 16:39 IST
Last Updated 3 ಡಿಸೆಂಬರ್ 2021, 16:39 IST
   

ನವದೆಹಲಿ: ಪೆಪ್ಸಿಕೊ ಇಂಡಿಯಾ ಕಂಪನಿಗೆ ಆಲೂಗಡ್ಡೆ ತಳಿಯೊಂದರ ಬೌದ್ಧಿಕ ಹಕ್ಕು ಸ್ವಾಮ್ಯ ನೀಡಿದ್ದನ್ನು ಸಸ್ಯ ತಳಿಗಳ ಸಂರಕ್ಷಣಾ ಪ್ರಾಧಿಕಾರವಾಗಿರುವ ಪಿಪಿವಿ ಆ್ಯಂಡ್ ಎಫ್‌ಆರ್ ರದ್ದುಗೊಳಿಸಿದೆ. ಎಫ್‌ಎಲ್‌–2027 ತಳಿಯ ಬೌದ್ಧಿಕ ಹಕ್ಕುಸ್ವಾಮ್ಯವನ್ನು ಪೆಪ್ಸಿಕೊ ಕಂಪನಿಗೆ ನೀಡಲಾಗಿತ್ತು.

ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಕಂಪನಿಯು, ಆದೇಶವನ್ನು ಪರಿಶೀಲಿಸುತ್ತಿರುವುದಾಗಿ ಹೇಳಿದೆ. ಕೃಷಿ ಕಾರ್ಯಕರ್ತೆ ಕವಿತಾ ಕುರುಗಂಟಿ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಪ್ರಾಧಿಕಾರವು ಈ ತೀರ್ಮಾನ ಕೈಗೊಂಡಿದೆ.ಪೆಪ್ಸಿಕೊ ಕಂಪನಿಯು ಈ ಹಿಂದೆ ಎಫ್‌ಎಲ್‌–2027 ಆಲೂಗಡ್ಡೆ ತಳಿಯ ವಿಚಾರವಾಗಿ ಗುಜರಾತಿನ ರೈತರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿತ್ತು.

ಈ ತಳಿಯ ಆಲೂಗಡ್ಡೆಯಿಂದ ಪೆಪ್ಸಿಕೊ ಕಂಪನಿಯು ಲೇಯ್ಸ್‌ ಚಿಪ್ಸ್‌ ತಯಾರಿಸುತ್ತಿದೆ ಎಂದು ರಾಯಿಟರ್ಸ್ ಸುದ್ದಿಸಂಸ್ಥೆ ವರದಿ ಮಾಡಿದೆ. ಪ್ರಾಧಿಕಾರ ನೀಡಿರುವ ಆದೇಶವನ್ನು ಸ್ವಾಗತಿಸಿರುವ ಗುಜರಾತಿನ ಆಲೂಗಡ್ಡೆ ಬೆಳೆಗಾರರು, ಇದು ರೈತರಿಗೆ ಸಿಕ್ಕ ಜಯ ಎಂದು ಹೇಳಿದ್ದಾರೆ. ‘ಇದು ಯಾವುದೇ ಬೆಳೆಯನ್ನು ಬೆಳೆಯುವ ಹಕ್ಕನ್ನು ಖಾತರಿಪಡಿಸುವಂತಿದೆ’ ಎಂದು ಗುಜರಾತಿನ ರೈತ ಬಿಪಿನ್ ಪಟೇಲ್ ಹೇಳಿದ್ದಾರೆ. ಪಟೇಲ್ ಅವರ ವಿರುದ್ಧ ಪೆಪ್ಸಿಕೊ ಕಂಪನಿಯು 2019ರಲ್ಲಿ ಕಾನೂನು ಕ್ರಮಕ್ಕೆ ಮುಂದಾಗಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.