ADVERTISEMENT

ವರ್ಷದ ಕನಿಷ್ಠ ಮಟ್ಟಕ್ಕೆ ಇಳಿಕೆಯಾದ ಪೆಟ್ರೋಲ್ ದರ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2018, 19:56 IST
Last Updated 25 ಡಿಸೆಂಬರ್ 2018, 19:56 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಇಳಿಮುಖವಾಗಿದೆ. ಹೀಗಾಗಿದೇಶದಾದ್ಯಂತ ಪೆಟ್ರೋಲ್‌ ದರ ಒಂದು ವರ್ಷದ ಕನಿಷ್ಠ ಮಟ್ಟಕ್ಕೆ ಇಳಿಕೆ ಕಂಡಿದೆ.

ಬೆಂಗಳೂರಿನಲ್ಲಿ2017ರ ಡಿಸೆಂಬರ್‌ 25ರಂದು ಲೀಟರ್ ಪೆಟ್ರೋಲ್‌ ದರ ₹70.73 ಇತ್ತು. 2018ರ ಡಿಸೆಂಬರ್‌ 25ರಂದು (ಮಂಗಳವಾರ) ₹70.35ಕ್ಕೆ ಅಂದರೆ 38 ಪೈಸೆ ಇಳಿಕೆಯಾಗಿದೆ.ಅಕ್ಟೋಬರ್‌ 1 ರಂದು ಒಂದು ಲೀಟರ್‌ ಪೆಟ್ರೋಲ್‌ ದರ ₹ 84.40 ಇತ್ತು. ಇದಕ್ಕೆ ಹೋಲಿಸಿದರೂ ಒಂದು ಲೀಟರಿಗೆ ₹ 14.05 ಇಳಿಕೆಯಾಗಿದೆ.

ಅಕ್ಟೋಬರ್‌ನಲ್ಲಿ ₹ 70ಕ್ಕೆ ತಲುಪಿದ್ದ ಒಂದು ಲೀಟರ್‌ ಡೀಸೆಲ್‌ ದರ ಮಂಗಳವಾರ ₹ 64.18ರಂತೆ ಮಾರಾಟವಾಯಿತು.

ADVERTISEMENT

ಕಚ್ಚಾ ತೈಲ: ಅಂತರರಾಷ್ಟ್ರೀಯ ಮಾರುಕಟ್ಟೆಗೆ ಪೂರೈಕೆ ಹೆಚ್ಚಾಗುತ್ತಿರುವುದರಿಂದ ಕಚ್ಚಾ ತೈಲ ದರ ನಿರಂತರವಾಗಿ ಇಳಿಕೆ ಕಾಣುತ್ತಿದೆ. ಅಕ್ಟೋಬರ್‌ನಲ್ಲಿ ಕಚ್ಚಾ ತೈಲ ದರ ಒಂದು ಬ್ಯಾರೆಲ್‌ಗೆ ₹ 86.10 ಡಾಲರ್‌ಗಳ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿತ್ತು. ಆ ಬಳಿಕ ನಿಧಾನಗತಿಯಲ್ಲಿ ಇಳಿಕೆ ಕಾಣಲಾರಂಭಿಸಿದೆ.

ಬ್ರೆಂಟ್‌ ಕಚ್ಚಾ ತೈಲ ದರ ಅಕ್ಟೋಬರ್‌–ಡಿಸೆಂಬರ್‌ ಅವಧಿಯಲ್ಲಿ ಶೇ 40ರಷ್ಟು ಇಳಿಕೆ ಕಂಡಿದೆ. ಮಂಗಳವಾರ ಒಂದು ಬ್ಯಾರೆಲ್‌ಗೆ 50.47 ಡಾಲರ್‌ನಂತೆ ಮಾರಾಟವಾಗಿದೆ. ಇದು 2017ರ ನಂತರ ಅತ್ಯಂತ ಕನಿಷ್ಠ ಮಟ್ಟವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.