ಬೆಂಗಳೂರು: ದೇಶದಲ್ಲಿಪೆಟ್ರೋಲ್, ಡೀಸೆಲ್ ದರಗಳು ಪೈಸೆಗಳ ಲೆಕ್ಕದಲ್ಲಿ ಇಳಿಕೆಯಾಗುತ್ತಿವೆ.
ಬೆಂಗಳೂರಿನಲ್ಲಿಮಂಗಳವಾರ ಪ್ರತಿ ಲೀಟರ್ಪೆಟ್ರೋಲ್ ದರ 13 ಪೈಸೆ ಮತ್ತು ಡೀಸೆಲ್ ದರ 7 ಪೈಸೆ ಇಳಿಕೆಯಾಗಿ, ಕ್ರಮವಾಗಿ ₹ 72.79 ಮತ್ತು₹ 67.70ರಂತೆ ಮಾರಾಟವಾಗಿವೆ.
ರೂಪಾಯಿ ಚೇತರಿಕೆ:ಕರೆನ್ಸಿ ಮಾರುಕಟ್ಟೆಯಲ್ಲಿ ಎರಡು ದಿನಗಳಿಂದ ಇಳಿಮುಖವಾಗಿದ್ದ ರೂಪಾಯಿ ಮೌಲ್ಯ ಮಂಗಳ
ವಾರ 23 ಪೈಸೆ ಹೆಚ್ಚಾಗಿ ಒಂದು ಡಾಲರ್ಗೆ ₹ 71.57ರಂತೆವಿನಿಮಯಗೊಂಡಿತು.
ಗುರುವಾರ ಆರ್ಬಿಐ ಹಣಕಾಸು ನೀತಿ ಪರಾಮರ್ಶೆ ನಡೆಸಲಿದೆ. ಹೀಗಾಗಿ ಹೂಡಿಕೆದಾರರು ಎಚ್ಚರಿಕೆಯಿಂದ ವಹಿವಾಟು ನಡೆಸುತ್ತಿದ್ದಾರೆ ಎಂದು ವರ್ತಕರು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.