ADVERTISEMENT

ಪೆಟ್ರೋಲ್‌, ಡೀಸೆಲ್ ದರ ಇಳಿಕೆ

ಪಿಟಿಐ
Published 15 ಏಪ್ರಿಲ್ 2021, 16:46 IST
Last Updated 15 ಏಪ್ರಿಲ್ 2021, 16:46 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ದೇಶದಾದ್ಯಂತ ಗುರುವಾರ ಇಂಧನ ದರ ಇಳಿಕೆ ಮಾಡಿವೆ. ಇದರಿಂದಾಗಿ ಮೂರು ವಾರಗಳಲ್ಲಿ ನಾಲ್ಕನೇ ಬಾರಿ ದರ ಇಳಿಕೆ ಮಾಡಿದಂತಾಗಿದೆ.

ಬೆಂಗಳೂರಿನಲ್ಲಿ ಪೆಟ್ರೋಲ್‌ ದರ ಪ್ರತಿ ಲೀಟರಿಗೆ 16 ಪೈಸೆ ಮತ್ತು ಡೀಸೆಲ್‌ ದರ 15 ಪೈಸೆ ಇಳಿಕೆ ಆಗಿದ್ದು, ಕ್ರಮವಾಗಿ ₹ 93.43 ಮತ್ತು ₹ 85.60ರಂತೆ ಮಾರಾಟವಾಗಿವೆ.

ದೆಹಲಿಯಲ್ಲಿ ಪೆಟ್ರೋಲ್‌ ದರ 16 ಪೈಸೆ ಕಡಿಮೆಯಾಗಿ ₹ 90.40ಕ್ಕೆ ಹಾಗೂ ಡೀಸೆಲ್‌ ದರ 14 ಪೈಸೆ ಕಡಿಮೆಯಾಗಿ ₹ 80.73ಕ್ಕೆ ತಲುಪಿದೆ. ಮುಂಬೈನಲ್ಲಿ ಪೆಟ್ರೋಲ್‌ ದರ 96.83 ಮತ್ತು ಡೀಸೆಲ್‌ ದರ ₹ 87.81ರಷ್ಟಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.