ಬೆಂಗಳೂರು: ಇ–ಕಾಮರ್ಸ್ ತಾಣ ಫ್ಲಿಪ್ಕಾರ್ಟ್ನ ‘ಬಿಗ್ ಬಿಲಿಯನ್ ಡೇಸ್’ನ ವಿಶೇಷ ಮಾರಾಟ ಸಂದರ್ಭದಲ್ಲಿ ಮೊಬೈಲ್ ವಾಲೆಟ್ ‘ಫೋನ್ಪೇ’ದ ವಹಿವಾಟು ಶೇ 150ರಷ್ಟು ಹೆಚ್ಚಳಗೊಂಡಿದೆ.
ಗರಿಷ್ಠ ಪ್ರಮಾಣದ ಮಾರಾಟ ಸಂದರ್ಭದಲ್ಲಿ, ಈ ಆ್ಯಪ್ನಲ್ಲಿ ಪ್ರತಿ ಸೆಕೆಂಡ್ಗೆ 50 ವಹಿವಾಟುಗಳು ನಡೆದಿದೆ. ಒಂದೇ ದಿನ ₹ 100 ಕೋಟಿ ಮೊತ್ತದ ವಹಿವಾಟು ಈ ವಾಲೆಟ್ ಮೂಲಕ ನಡೆದಿದೆ. ‘ದೇಶದ ಮಹಾನಗರಗಳಷ್ಟೇ ಅಲ್ಲದೆ ಸಣ್ಣ –ಪುಟ್ಟ ಪಟ್ಟಣಗಳಲ್ಲೂ ಫೋನ್ಪೇ ಆ್ಯಪ್ ಬಳಕೆದಾರರ ಮೆಚ್ಚುಗೆಗೆ ಪಾತ್ರವಾಗಿದೆ’ ಎಂದು ಸಂಸ್ಥೆಯ ಕಾರ್ಯತಂತ್ರ ವಿಭಾಗದ ಮುಖ್ಯಸ್ಥ ಕಾರ್ತಿಕ್ ರಘುಪತಿ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.