ADVERTISEMENT

ಅರ್ಹ ಆಟೊಮೊಬೈಲ್‌ ಕಂಪನಿಗಳಿಗೆ ಪಿಎಲ್‌ಐ ಶೀಘ್ರ ಪಾವತಿ: ಸಚಿವ ಎಚ್‌ಡಿಕೆ

ಪಿಟಿಐ
Published 10 ಜುಲೈ 2025, 13:32 IST
Last Updated 10 ಜುಲೈ 2025, 13:32 IST
ಎಚ್‌.ಡಿ.ಕುಮಾರಸ್ವಾಮಿ
ಎಚ್‌.ಡಿ.ಕುಮಾರಸ್ವಾಮಿ   

ನವದೆಹಲಿ: ಉತ್ಪಾದನೆ ಆಧಾರಿತ ಉತ್ತೇಜನ (ಪಿಎಲ್‌ಐ) ಯೋಜನೆಯ ಅಡಿ ಅರ್ಹ ಆಟೊಮೊಬೈಲ್‌ ಕಂಪನಿಗಳಿಗೆ ನೀಡಬೇಕಿರುವ ಮೊತ್ತವನ್ನು ತ್ವರಿತವಾಗಿ ನೀಡಲಾಗುವುದು ಎಂದು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

2025ರ ಮಾರ್ಚ್‌ವರೆಗೆ ಪಿಎಲ್‌ಐ ಆಟೊ ಯೋಜನೆಯು ₹29,576 ಕೋಟಿ ಹೂಡಿಕೆ ಆಕರ್ಷಿಸಿದ್ದು, 44,987ಕ್ಕೂ ಹೆಚ್ಚು ಉದ್ಯೋಗ ಸೃಷ್ಟಿಸಿದೆ ಎಂದು ‘ಎಕ್ಸ್‌’ನಲ್ಲಿ ಗುರುವಾರ ಹೇಳಿದ್ದಾರೆ. 

2022–23ರ ಆರ್ಥಿಕ ವರ್ಷದಿಂದ 2026–27ರ ಆರ್ಥಿಕ ವರ್ಷದವರೆಗೆ ಆಟೊಮೊಬೈಲ್‌ ಮತ್ತು ವಾಹನದ ಬಿಡಿಭಾಗಗಳ ಉದ್ಯಮಕ್ಕೆ ಪಿಎಲ್‌ಐ ಯೋಜನೆ ಅಡಿ ₹25,938 ಕೋಟಿ ನಿಗದಿಪಡಿಸಲಾಗಿದೆ. 2024–25ರ ಆರ್ಥಿಕ ವರ್ಷದಲ್ಲಿ ನಾಲ್ಕು ಕಂಪನಿಗಳು ಪಿಎಲ್‌ಐಗೆ ಅರ್ಜಿ ಸಲ್ಲಿಸಿದ್ದು, ₹322 ಕೋಟಿ ಪಾವತಿಸಲಾಗಿದೆ ಎಂದು ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.