ನವದೆಹಲಿ: 2023–24ನೇ ಆರ್ಥಿಕ ವರ್ಷದಲ್ಲಿ ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಡಿವಿಡೆಂಡ್ ಪಾವತಿ ಪ್ರಮಾಣದಲ್ಲಿ ಶೇ 33ರಷ್ಟು ಏರಿಕೆಯಾಗಿದೆ. ಇದು ಬ್ಯಾಂಕ್‌ಗಳ ಹಣಕಾಸಿನ ಸ್ಥಿತಿಯ ಸದೃಢಕ್ಕೆ ಕನ್ನಡಿ ಹಿಡಿದಿದೆ.
2022–23ರಲ್ಲಿ ₹20,964 ಕೋಟಿ ಡಿವಿಡೆಂಡ್ ಪಾವತಿಸಿದ್ದವು. 2023–24ರಲ್ಲಿ ₹27,830 ಕೋಟಿ ಪಾವತಿಸಿವೆ. ಈ ಪೈಕಿ ಕೇಂದ್ರದ ಪಾಲು ಶೇ 65ರಷ್ಟಿದ್ದು, ಒಟ್ಟು ₹18,013 ಕೋಟಿ ಪಾವತಿಸಿವೆ ಎಂದು ಸರ್ಕಾರದ ಅಂಕಿಅಂಶ ತಿಳಿಸಿವೆ.
ಸರ್ಕಾರಿ ಸ್ವಾಮ್ಯದ 12 ಬ್ಯಾಂಕ್‌ಗಳು 2022–23ರಲ್ಲಿ ₹1.05 ಲಕ್ಷ ಕೋಟಿ ನಿವ್ವಳ ಲಾಭಗಳಿಸಿದ್ದರೆ, 2023–24ರಲ್ಲಿ ₹1.41 ಲಕ್ಷ ಕೋಟಿ ಲಾಭಗಳಿಸಿವೆ. 2024–25ನೇ ಆರ್ಥಿಕ ವರ್ಷದ ಮೊದಲ ಒಂಬತ್ತು ತಿಂಗಳ ಅವಧಿಯಲ್ಲಿ ₹1.29 ಲಕ್ಷ ಕೋಟಿ ಲಾಭ ಗಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.