ADVERTISEMENT

ಸರ್ಕಾರಿ ವಿಮಾ ಕಂಪನಿಗಳಿಗೆ ಕೇಂದ್ರದಿಂದ ಹೆಚ್ಚುವರಿ ಬಂಡವಾಳ?

ಪಿಟಿಐ
Published 8 ಮೇ 2022, 11:28 IST
Last Updated 8 ಮೇ 2022, 11:28 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಕೇಂದ್ರ ಸರ್ಕಾರವು ಈ ವರ್ಷ ಸರ್ಕಾರಿ ವಲಯದ ಮೂರು ವಿಮಾ ಕಂಪನಿಗಳಲ್ಲಿ ₹ 3–5 ಸಾವಿರ ಕೋಟಿಯವರೆಗೆ ಹೆಚ್ಚುವರಿ ಬಂಡವಾಳ ಹೂಡಿಕೆ ಮಾಡುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.

ಈ ಹೆಚ್ಚುವರಿ ಬಂಡವಾಳದಿಂದ ನ್ಯಾಷನಲ್‌ ಇನ್ಶುರೆನ್ಸ್‌ ಕಂಪನಿ ಲಿಮಿಟೆಡ್‌, ಓರಿಯಂಟಲ್‌ ಇನ್ಶುರೆನ್ಸ್‌ ಕಂಪನಿ ಲಿಮಿಟೆಡ್‌ ಮತ್ತು ಯುನೈಟೆಡ್‌ ಇಂಡಿಯಾ ಇನ್ಶುರೆನ್ಸ್‌ ಕಂಪನಿಗಳ ಆರ್ಥಿಕ ಸ್ಥಿತಿ ಸುಧಾರಿಸಲಿದೆ ಎಂದು ತಿಳಿಸಿವೆ.

ಕಂಪನಿಗಳ ಅಗತ್ಯ ಮತ್ತು ಆರ್ಥಿಕ ಸಾಧನೆಯ ಆಧಾರದ ಮೇಲೆ ಸರ್ಕಾರವು ಬಂಡವಾಳ ನೀಡಲಿದೆ. ಹಿಂದಿನ ಹಣಕಾಸು ವರ್ಷದಲ್ಲಿ ಕೇಂದ್ರ ಸರ್ಕಾರವು ಈ ಮೂರು ಕಂಪನಿಗಳಲ್ಲಿ ಒಟ್ಟಾರೆ ₹ 5 ಸಾವಿರ ಕೋಟಿ ಬಂಡವಾಳ ಹೂಡಿಕೆ ಮಾಡಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.