ADVERTISEMENT

ರೆಪೊ ದರ ಹೆಚ್ಚಿಸದಂತೆ ಕ್ರೆಡಾಯ್ ಮನವಿ

ಪಿಟಿಐ
Published 30 ಮಾರ್ಚ್ 2023, 16:14 IST
Last Updated 30 ಮಾರ್ಚ್ 2023, 16:14 IST

ನವದೆಹಲಿ: ರೆಪೊ ದರವನ್ನು ಇನ್ನಷ್ಟು ಹೆಚ್ಚಿಸಬಾರದು ಎಂದು ರಿಯಲ್ ಎಸ್ಟೇಟ್‌ ಕಂಪನಿಗಳ ಒಕ್ಕೂಟ ಕ್ರೆಡಾಯ್‌, ಭಾರತೀಯ ರಿಸರ್ವ್‌ ಬ್ಯಾಂಕ್‌ಗೆ (ಆರ್‌ಬಿಐ) ಮನವಿ ಮಾಡಿದೆ.

ರೆಪೊ ದರವನ್ನು ಮತ್ತೆ ಹೆಚ್ಚಿಸಿದರೆ ಬಿಲ್ಡರ್‌ಗಳು ಹಾಗೂ ಮನೆ ಖರೀದಿ ಮಾಡುವವರಿಗೆ ಸಾಲದ ಮೇಲಿನ ಬಡ್ಡಿ ಹೊರೆ ಜಾಸ್ತಿಯಾಗುತ್ತದೆ. ಇದು ಮನೆಗಳ ಮಾರಾಟದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಕ್ರೆಡಾಯ್ ಹೇಳಿದೆ.

ಆರ್‌ಬಿಐನ ಹಣಕಾಸು ನೀತಿ ಸಮಿತಿಯು (ಎಂಪಿಸಿ) ರೆಪೊ ದರ ಕುರಿತು ಏಪ್ರಿಲ್‌ 6ರಂದು ತೀರ್ಮಾನ ಪ್ರಕಟಿಸಲಿದೆ. ಎಂಪಿಸಿ ಈ ಬಾರಿ ರೆಪೊ ದರವನ್ನು ಶೇ 0.25ರಷ್ಟು ಹೆಚ್ಚಿಸಬಹುದು ಎಂಬ ನಿರೀಕ್ಷೆ ಇದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.