ADVERTISEMENT

ರೊಸೆಟ್ಟಾ, ರಿಜಿಸ್ಟ್ರಿ ಕಲೆಕ್ಷನ್‌ ಒಪ್ಪಂದ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2019, 18:37 IST
Last Updated 7 ಫೆಬ್ರುವರಿ 2019, 18:37 IST

ಬೆಂಗಳೂರು: ಐಷಾರಾಮಿ ವಿಹಾರ ಮಾಲೀಕತ್ವ ಸಮೂಹವಾಗಿರುವ ರೊಸೆಟ್ಟಾ ಬೈ ಫರ್ನ್ಸ್‌ ಸಂಸ್ಥೆಯು, ರಿಜಿಸ್ಟ್ರಿ ಕಲೆಕ್ಷನ್‌ (ಟಿಆರ್‌ಸಿ) ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದೆ.

ಐಷಾರಾಮಿ ವಿಹಾರ ಬದಲಾವಣೆ ಹಾಗೂ ಸದಸ್ಯತ್ವ ಕಾರ್ಯಕ್ರಮ ಇದಾಗಿದೆ.ಇದರಿಂದ ಕ್ಲಬ್‌ ರೊಸೆಟ್ಟಾದ 50 ಸಾವಿರಕ್ಕೂ ಅಧಿಕ ಸದಸ್ಯರಿಗೆ ವಿಶ್ವದಾದ್ಯಂತ 240 ಅಧಿಕ ರೆಸಾರ್ಟ್‌ಗಳಲ್ಲಿ ಐಷಾರಾಮಿ ಸೌಲಭ್ಯಗಳನ್ನು ಬಳಸುವ ಅವಕಾಶ ಸಿಗಲಿದೆ.

‘ರೊಸೆಟ್ಟಾ ಬೈ ಫರ್ನ್ಸ್‌ ಸಂಸ್ಥೆಯ ಮೊದಲ ರೆಸಾರ್ಟ್‌ ನಿರ್ಮಾಣ ಸಕಲೇಶಪುರ ಬಳಿ 100 ಎಕರೆಯಲ್ಲಿ ಆರಂಭವಾಗಲಿದೆ. ಮೂರು ವರ್ಷಗಳಲ್ಲಿ ಕರ್ನಾಟಕ, ತಮಿಳುನಾಡು ಮತ್ತು ಕೇರಳದಲ್ಲಿ ₹ 700 ಕೋಟಿ ಮೊತ್ತದ ವಿವಿಧ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ’ ಎಂದು ರೊಸೆಟ್ಟಾ ಸಂಸ್ಥೆಯ ಅಧ್ಯಕ್ಷ ಎರೋಲ್‌ ಫರ್ನಾಂಡೀಸ್‌ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.