ADVERTISEMENT

ರೂಪಾಯಿ 1 ತಿಂಗಳ ಕನಿಷ್ಠ

ಪಿಟಿಐ
Published 14 ಜನವರಿ 2019, 16:26 IST
Last Updated 14 ಜನವರಿ 2019, 16:26 IST
   

ಮುಂಬೈ: ಕರೆನ್ಸಿ ಮಾರುಕಟ್ಟೆಯಲ್ಲಿ ಡಾಲರ್‌ ಎದುರು ರೂಪಾಯಿ ಮೌಲ್ಯ ಸೋಮವಾರ 43 ಪೈಸೆ ಇಳಿಕೆ ಕಂಡು,ಒಂದು ತಿಂಗಳ ಕನಿಷ್ಠ ಮಟ್ಟವಾದ ₹ 70.92ಕ್ಕೆ ತಲುಪಿತು.

ಕೈಗಾರಿಕಾ ಬೆಳವಣಿಗೆ ಕುಂಠಿತ, ಷೇರುಪೇಟೆಯಲ್ಲಿ ನಕಾರಾತ್ಮಕ ವಹಿವಾಟು ಹಾಗೂ ವಿದೇಶಿ ಸಾಂಸ್ಥಿಕ ಬಂಡವಾಳ ಹೊರಹರಿವಿನ ಕಾರಣಗಳಿಂದಾಗಿ ರೂಪಾಯಿ ಮೌಲ್ಯದಲ್ಲಿ ಇಳಿಕೆಯಾಗಿದೆ ಎಂದು ತಜ್ಞರು ಹೇಳಿದ್ದಾರೆ.

ಇತರೆ ಕರೆನ್ಸಿಗಳ ಎದುರು ಡಾಲರ್‌ ಮೌಲ್ಯ ಇಳಿಕೆ ಮತ್ತು ಕಚ್ಚಾ ತೈಲ ದರದಲ್ಲಿನ ಇಳಿಕೆಯಿಂದ ರೂಪಾಯಿ ಮೌಲ್ಯ ಹೆಚ್ಚಿನ ನಷ್ಟ ಅನುಭವಿಸುವುದು ತಪ್ಪಿತು ಎಂದೂ ವಿಶ್ಲೇಷಣೆ ಮಾಡಿದ್ದಾರೆ.

ADVERTISEMENT

ಬ್ರೆಂಟ್‌ ಕಚ್ಚಾ ತೈಲ ದರ ಶೇ 1.41ರಷ್ಟು ಇಳಿಕೆಯಾಗಿ ಒಂದು ಬ್ಯಾರೆಲ್‌ಗೆ 59.63 ಡಾಲರ್‌ಗಳಿಗೆ ತಲುಪಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.