ADVERTISEMENT

ಸಾರ್ವಕಾಲಿಕ ಕನಿಷ್ಠ ಮೌಲ್ಯಕ್ಕೆ ಕುಸಿದ ರೂಪಾಯಿ

ಪಿಟಿಐ
Published 15 ಜೂನ್ 2022, 14:28 IST
Last Updated 15 ಜೂನ್ 2022, 14:28 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ಅಮೆರಿಕದ ಡಾಲರ್ ಎದುರು 18 ಪೈಸೆ ಕುಸಿದಿರುವ ರೂಪಾಯಿ ಮೌಲ್ಯವು ಬುಧವಾರದ ವಹಿವಾಟಿಲ್ಲಿ 78.22ಕ್ಕೆ ಇಳಿಕೆ ಕಂಡಿತು. ಇದು ರೂಪಾಯಿಯ ಸಾರ್ವಕಾಲಿಕ ಕನಿಷ್ಠ ಮೌಲ್ಯ.

ಷೇರುಪೇಟೆಗಳಲ್ಲಿನ ಕುಸಿತ, ವಿದೇಶಿ ಬಂಡವಾಳದ ಹೊರಹರಿವು ನಿಂತಿಲ್ಲದಿರುವುದು ಮೌಲ್ಯ ಕುಸಿತಕ್ಕೆ ಪ್ರಮುಖ ಕಾರಣಗಳು ಎಂದು ತಜ್ಞರು ಹೇಳಿದ್ದಾರೆ. ರೂಪಾಯಿ ಮೌಲ್ಯವು ಸತತ ನಾಲ್ಕು ದಿನಗಳಿಂದ ಕುಸಿಯುತ್ತಲೇ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT