ADVERTISEMENT

ರೂಪಾಯಿ ಮೌಲ್ಯ ಮತ್ತಷ್ಟು ಕುಸಿತ

ಪಿಟಿಐ
Published 18 ಮೇ 2022, 15:47 IST
Last Updated 18 ಮೇ 2022, 15:47 IST

ಮುಂಬೈ (ಪಿಟಿಐ): ಅಮೆರಿಕದ ಡಾಲರ್ ಎದುರು ಮತ್ತಷ್ಟು ಕುಸಿದಿರುವ ರೂಪಾಯಿ ಮೌಲ್ಯ, ಬುಧವಾರ 77.61ಕ್ಕೆ ತಲುಪಿದೆ. ಇದು ಈವರೆಗಿನ ಅತ್ಯಂತ ಕೆಳಗಿನ ಮಟ್ಟ.

ವಿದೇಶಿ ಬಂಡವಾಳದ ಹೂರಹರಿವು ನಿಂತಿಲ್ಲದಿರುವುದು, ಹಣದುಬ್ಬರ ನಿಯಂತ್ರಿಸಲು ಅಮೆರಿಕದ ಫೆಡರಲ್ ರಿಸರ್ವ್ ಬಡ್ಡಿ ದರವನ್ನು ದೊಡ್ಡ ಮಟ್ಟದಲ್ಲಿ ಹೆಚ್ಚಿಸಬಹುದು ಎಂಬ ಆತಂಕ ಈ ಕುಸಿತಕ್ಕೆ ಒಂದು ಕಾರಣ.

ಡಾಲರ್ ಮತ್ತಷ್ಟು ಬಲವರ್ಧಿಸಿಕೊಂಡಿರುವುದು ಹಾಗೂ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಹೆಚ್ಚಾಗಿರುವುದು ಕೂಡ ರೂಪಾಯಿ ಮೌಲ್ಯ ಇಳಿಕೆಗೆ ಕಾರಣವಾದವು. ಬುಧವಾರ ರೂಪಾಯಿ ಮೌಲ್ಯ 17 ಪೈಸೆ ತಗ್ಗಿದೆ.

ADVERTISEMENT

ವಿದೇಶಿ ಹೂಡಿಕೆದಾರರು ದೇಶದ ಬಂಡವಾಳ ಮಾರುಕಟ್ಟೆಗಳಲ್ಲಿ ಬುಧವಾರ ₹ 1,254 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು 109 ಅಂಶ ಇಳಿಕೆ ಕಂಡಿದೆ. ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ 19 ಅಂಶ ಕೆಳಗಿಳಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.