ADVERTISEMENT

ರೂಪಾಯಿ 24 ಪೈಸೆ ಇಳಿಕೆ

ಪಿಟಿಐ
Published 22 ಅಕ್ಟೋಬರ್ 2018, 17:22 IST
Last Updated 22 ಅಕ್ಟೋಬರ್ 2018, 17:22 IST

ಮುಂಬೈ: ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಸೋಮವಾರ ಡಾಲರ್‌ ಎದುರು ರೂಪಾಯಿ ಮೌಲ್ಯ 24 ಪೈಸೆ ಇಳಿಕೆಯಾಗಿದೆ.ಒಂದು ಡಾಲರ್‌ಗೆ ₹ 73.56 ರಂತೆ ಮಾರಾಟವಾಯಿತು.

ಮಾರುಕಟ್ಟೆಯಿಂದ ಬಂಡವಾಳ ಹೊರಹರಿವು ಮತ್ತು ಡಾಲರ್‌ ಮೌಲ್ಯ ಹೆಚ್ಚಾಗುತ್ತಿರುವುದರಿಂದ ರೂಪಾಯಿ ಇಳಿಕೆ ಕಂಡಿದೆ ಎಂದು ತಜ್ಞರು ಹೇಳಿದ್ದಾರೆ.

ದೇಶದ ಷೇರುಪೇಟೆಯಲ್ಲಿ ಮಾರಾಟದ ಒತ್ತಡ ಸೃಷ್ಟಿಯಾಗಿತ್ತು. ಸೌದಿ ಪತ್ರಕರ್ತ ಜಮಲ್‌ ಖಶೋಗ್ಗಿ ಹತ್ಯೆಯಿಂದ ಉಂಟಾಗಿರುವ ಜಾಗತಿಕ ರಾಜಕೀಯ ಬಿಕ್ಕಟ್ಟಿನಿಂದ ಕಚ್ಚಾ ತೈಲ ದರವೂ ಏರಿಕೆಯಾಗಿರುವುದು ರೂಪಾಯಿ ಮೇಲಿನ ಒತ್ತಡವನ್ನು ಇನ್ನಷ್ಟು ಹೆಚ್ಚಿಸಿದೆ ಎಂದು ಮಾರುಕಟ್ಟೆ ಪರಿಣತರು ವಿಶ್ಲೇಷಣೆ ಮಾಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.