ADVERTISEMENT

₹ ಬೆಲೆ 2 ತಿಂಗಳ ಗರಿಷ್ಠ ಮಟ್ಟಕ್ಕೆ

ಪಿಟಿಐ
Published 12 ಮಾರ್ಚ್ 2019, 20:21 IST
Last Updated 12 ಮಾರ್ಚ್ 2019, 20:21 IST
RUPEE
RUPEE   

ಮುಂಬೈ :ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್‌ ಎದುರು ರೂಪಾಯಿ ಮೌಲ್ಯ 18 ಪೈಸೆ ಹೆಚ್ಚಾಗಿ ₹ 69.71ರಂತೆ ವಿನಿಮಯಗೊಂಡಿತು.

ಡಾಲರ್‌ ಎದುರು ರೂಪಾಯಿ ವಿನಿಮಯ ದರ 2 ತಿಂಗಳಿಗೂ ಹೆಚ್ಚಿನ ಗರಿಷ್ಠ ಮಟ್ಟಕ್ಕೆ ತಲುಪಿದೆ. 2 ದಿನಗಳಲ್ಲಿ 43 ಪೈಸೆಗಳ ಗಳಿಕೆ ಕಂಡಿದೆ. ವಿದೇಶಿ ಬಂಡವಾಳ ಒಳಹರಿವು, ವಿದೇಶಿ ಮಾರುಕಟ್ಟೆಗಳಲ್ಲಿ ಡಾಲರ್ ಮೌಲ್ಯ ಇಳಿಕೆ, ರಫ್ತುದಾರರು ಮತ್ತು ಬ್ಯಾಂಕ್‌ಗಳು ಡಾಲರ್‌ ಮಾರಾಟಕ್ಕೆ ಗಮನ ನೀಡಿದ್ದರಿಂದ ರೂಪಾಯಿ ಮೌಲ್ಯ ಹೆಚ್ಚಾಗಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT