ADVERTISEMENT

ಗ್ರಾಮೀಣ ಬಡತನ ಶೇ 4.86ಕ್ಕೆ ಇಳಿಕೆ: ಎಸ್‌ಬಿಐ ವರದಿ

​ಪ್ರಜಾವಾಣಿ ವಾರ್ತೆ
Published 3 ಜನವರಿ 2025, 15:44 IST
Last Updated 3 ಜನವರಿ 2025, 15:44 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: 2011–12ರಲ್ಲಿ ದೇಶದ ಗ್ರಾಮೀಣ ಪ್ರದೇಶದ ಬಡತನ ಪ್ರಮಾಣ ಶೇ 25.7ರಷ್ಟಿತ್ತು. 2023–24ನೇ ಆರ್ಥಿಕ ವರ್ಷದ ಅಂತ್ಯಕ್ಕೆ ಶೇ 4.86ಕ್ಕೆ ಇಳಿದಿದೆ ಎಂದು ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದ ಸಂಶೋಧನಾ ವರದಿ ಶುಕ್ರವಾರ ತಿಳಿಸಿದೆ.

ನಗರ ಪ್ರದೇಶದ ಬಡತನ ಪ್ರಮಾಣ ಕೂಡ ಶೇ 13.7ರಿಂದ ಶೇ 4.09ಕ್ಕೆ ತಗ್ಗಿದೆ ಎಂದು ಹೇಳಿದೆ.

‘ಬಡತನ ನಿವಾರಣೆಗೆ ಸಂಬಂಧಿಸಿದಂತೆ ಸರ್ಕಾರ ರೂಪಿಸಿರುವ ಕಾರ್ಯಕ್ರಮಗಳೇ ಇದಕ್ಕೆ ಕಾರಣ. ಅಲ್ಲದೆ, ಆಹಾರ ಪದಾರ್ಥಗಳ ಬೆಲೆಯು ಗಣನೀಯವಾಗಿ ಇಳಿಕೆಯಾಗಿದೆ. ಇದರಿಂದ ಆಹಾರ ವೆಚ್ಚವು ಕಡಿಮೆಯಾಗಿದೆ’ ಎಂದು ಎಸ್‌ಬಿಐನ ಬಳಕೆಯ ವೆಚ್ಚ ಸಮೀಕ್ಷೆ ತಿಳಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.