ADVERTISEMENT

ಸೌದಿ ಅರೇಬಿಯಾದ ತೈಲ ಘಟಕಗಳ ಮೇಲೆ ಡ್ರೋನ್‌ ದಾಳಿ

ಏಜೆನ್ಸೀಸ್
Published 20 ಮಾರ್ಚ್ 2021, 11:23 IST
Last Updated 20 ಮಾರ್ಚ್ 2021, 11:23 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ದುಬೈ: ಸೌದಿ ಅರೇಬಿಯಾದ ತೈಲ ಘಟಕಗಳ ಮೇಲೆ ಶುಕ್ರವಾರ ಡ್ರೋನ್‌ ದಾಳಿ ನಡೆದಿದೆ. ಆದರೆ ಯಾವುದೇ ಹಾನಿ ಆಗಿಲ್ಲ. ತೈಲ ಪೂರೈಕೆಗೂ ಅಡ್ಡಿಯಾಗಿಲ್ಲ ಎಂದು ಸೌದಿ ಪ್ರೆಸ್‌ ಏಜೆನ್ಸಿ ತಿಳಿಸಿದೆ.

ಯೆಮನ್‌ನ ಹೂಥಿ ಬಂಡುಕೋರರು ಮೇಲಿಂದ ಮೇಲೆ ಸೌದಿ ಅರೇಬಿಯಾದ ತೈಲಾಗಾರಗಳ ಮೇಲೆ ಡ್ರೋನ್‌ ಮತ್ತು ಕ್ಷಿಪಣಿ ದಾಳಿ ನಡೆಸುತ್ತಲೆ ಇದ್ದಾರೆ. ಸೌದಿಯ ಅತಿದೊಡ್ಡ ಕಚ್ಚಾತೈಲ ಸಂಸ್ಕರಣಾಗಾರ ಇರುವ ರಾಸ್‌ ತನುರಾದ ಮೇಲೆ ಈಚೆಗೆ ಡ್ರೋನ್‌ ದಾಳಿ ನಡೆದಿದ್ದು, ಇದು ಸೌದಿಯ ಕಳವಳಕ್ಕೆ ಕಾರಣವಾಗಿದೆ. ಯೆಮೆನ್‌ನ ಹೂಥಿ ಪಡೆಗಳು ಇದೇ ತಿಂಗಳ 7ರಂದು ಆರಾಮ್ಕೊ ಘಟಕದ ಮೇಲೆ ಡ್ರೋನ್ ಮತ್ತು ಕ್ಷಿಪಣಿ ದಾಳಿ ನಡಸಿದ್ದವು.

ಸೌದಿ ನೇತೃತ್ವದ ಸಮ್ಮಿಶ್ರ ಪಡೆಗಳು ಯೆಮನ್‌ನಲ್ಲಿ ದಕ್ಷಿಣ ಗಡಿಯುದ್ದಕ್ಕೂ ಇರಾನ್ ಬೆಂಬಲಿತ ಹೂಥಿ ಬಂಡುಕೋರರೊಂದಿಗೆ ಹೋರಾಡುತ್ತವೆ

ADVERTISEMENT

ನಿರ್ದಿಷ್ಟವಾಗಿ ಯಾವ ಘಟಕದ ಮೇಲೆ ದಾಳಿ ನಡೆಯಿತು ಎನ್ನುವ ಬಗ್ಗೆ ಅಲ್ಲಿನ ಆಡಳಿತವು ಹೆಚ್ಚಿನ ಮಾಹಿತಿ ನೀಡಿಲ್ಲ. ಅತಿದೊಡ್ಡ ತೈಲ ಕಂಪನಿ ಆರಾಮ್ಕೊ ರಿಯುಧ್‌ನ ಆಗ್ನೇಯ ಭಾಗದಲ್ಲಿ ತೈಲ ಸಂಸ್ಕರಣೆ ನಡೆಸುತ್ತಿದ್ದು, ಗ್ಯಾಸೋಲಿನ್‌, ಡೀಸೆಲ್‌, ಜೆಟ್‌ ಇಂಧನವನ್ನು ಉತ್ಪಾದಿಸುತ್ತಿದೆ. ದಾಳಿಯ ಕುರಿತಾಗಿ ಪ್ರತಿಕ್ರಿಯೆ ನೀಡಲುಕಂಪನಿ ನಿರಾಕರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.